ಕರ್ನಾಟಕ

karnataka

ETV Bharat / state

ಇಂಡಿ ಪುರಸಭೆ ತಾತ್ಕಾಲಿಕ ಕಟ್ಟಡಕ್ಕೆ ಬೆಂಕಿ; ಮಹತ್ವದ ದಾಖಲೆಗಳು ಭಸ್ಮ

ಸ್ವಂತ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಜಯಪುರ ಜಿಲ್ಲೆಯ ಇಂಡಿ ಪುರಸಭೆ ಕಚೇರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ತಗುಲಿದ್ದು, ಮಹತ್ವದ ದಾಖಲೆಗಳು ಬೆಂಕಿಗಾಹುತಿಯಾಗಿವೆ.

Electrical short circuit in indi municipal temporary building
ಇಂಡಿ ಪುರಸಭೆ ತಾತ್ಕಾಲಿಕ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್

By

Published : Mar 14, 2021, 6:55 AM IST

ವಿಜಯಪುರ: ಸ್ವಂತ ಕಟ್ಟಡ ಕಾಮಗಾರಿ ಸಂದರ್ಭದಲ್ಲಿ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಂಡಿ ಪುರಸಭೆ ಕಚೇರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ತಗುಲಿದ್ದು, ಮಹತ್ವದ ದಾಖಲೆಗಳು ಬೆಂಕಿಗಾಹುತಿಯಾಗಿವೆ.

ಇಂಡಿ ಪುರಸಭೆ ತಾತ್ಕಾಲಿಕ ಕಟ್ಟಡದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಇತ್ತೀಚೆಗೆ ಇಂಡಿ ಪುರಸಭೆ ಸ್ವಂತ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಸ್ಥಳಾಂತರ ಮಾಡಲಾಗಿತ್ತು. ಆದರೆ, ಕಚೇರಿ ಸ್ಥಳಾಂತರವಾದ ಬಳಿಕವೂ 2013ರ ನಂತರದ ಅವಶ್ಯಕ ದಾಖಲೆಗಳು ತಾತ್ಕಾಲಿಕ ಕಟ್ಟಡವಾದ ಬಸವೇಶ್ವರ ಮಂಗಲ ಕಾರ್ಯಾಲಯದಲ್ಲೇ ಉಳಿದುಕೊಂಡಿದ್ದವು. ಇದೀಗ ಆ ಕಚೇರಿಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದಾಗಿ ಬೆಂಕಿ ತಗುಲಿದ್ದು, ಮಹತ್ವದ ದಾಖಲೆಗಳು ಬೆಂಕಿಗಾಹುತಿಯಾಗಿವೆ.

ಓದಿ:ಚಿಕ್ಕಬಳ್ಳಾಪುರದಲ್ಲಿ ಅನಾಹುತ: ಕುರಿಗಳ ಶೆಡ್‌ಗೆ ಬೆಂಕಿ, 60 ಕುರಿಗಳು,20 ಮೇಕೆ, 4 ಹಸುಗಳು ಭಸ್ಮ

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

For All Latest Updates

TAGGED:

ABOUT THE AUTHOR

...view details