ವಿಜಯಪುರ:ಜಿಲ್ಲೆಯಲ್ಲಿ ಭೂಕಂಪನದ ಅನುಭವವಾಗಿದೆ. ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ರಾತ್ರಿ 11.30ರ ಸುಮಾರಿಗೆ ಭೂಕಂಪನ ಆಗಿರುವ ಅನುಭವವಾಗಿದೆ.
ವಿಜಯಪುರದಲ್ಲಿ ಭೂಕಂಪನದ ಅನುಭವ... ಹೆದರಿ ಮನೆಯಿಂದ ಹೊರಬಂದ ಜನ್ರು! - ಭೂಕಂಪನದ ಅನುಭವ
ರಾತ್ರಿ ವೇಳೆ ಗಾಢ ನಿದ್ರೆಯಲ್ಲಿದ್ದಾಗ ಭೂಮಿ ಕಂಪಿಸಿದ್ದು, ತಕ್ಷಣವೇ ಜನರು ಹೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.
ರಾತ್ರಿ ವೇಳೆ ಗಾಢ ನಿದ್ರೆಯಲ್ಲಿದ್ದಾಗ ಭೂಮಿ ಕಂಪಿಸಿದ್ದು, ತಕ್ಷಣವೇ ಜನರು ಹೆದರಿ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಬಿಟ್ಟು ಬಿಡದೇ ಮಳೆಯಾದ ಕಾರಣ ಜನರು ಮನೆ ಬಿಟ್ಟು ಹೊರಗಡೆ ಬಂದಿರಲಿಲ್ಲ.
ರಾತ್ರಿ 11.30ರ ಸುಮಾರಿಗೆ ಭೂಮಿ ಕಂಪಿಸಿದ್ದು, ಕೆಲವರ ಮೊಬೈಲ್, ಎತ್ತರದಲ್ಲಿಟ್ಟಿದ್ದ ವಸ್ತುಗಳು ಕೆಳಗೆ ಬಿದ್ದಿವೆ. ಇದರಿಂದ ಗ್ರಾಮದ ಜನ ಹೆದರಿ ಮನೆಯಿಂದ ಹೊರಗೆ ಬಂದಿದ್ದಾರೆ. ಸಾಕಷ್ಟು ಜನರಿಗೆ ಇದು ಕನಸಿನಲ್ಲಿ ನಡೆದಿದೆ ಎನ್ನುವ ಅನುಭವದಂತಾಗಿದೆ. ಕೇವಲ ಮನಗೂಳಿ ಅಷ್ಟೇ ಅಲ್ಲದೇ ಸುತ್ತ ಮುತ್ತಲಿನ ಗ್ರಾಮದಲ್ಲಿ ಭೂಕಂಪದ ಅನುಭವವಾಗಿದೆ. ಜನ ತಮ್ಮ ಸಂಬಂಧಿಕರಿಗೆ ಪೋನ್ ಕರೆ ಮಾಡಿ ತಮಗೆ ಆಗಿರುವ ಅನುಭವ ಹಂಚಿಕೊಂಡಿದ್ದಾರೆ.