ಕರ್ನಾಟಕ

karnataka

ETV Bharat / state

Earthquake..ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಂಪಿಸಿದ ಭೂಮಿ: ಆತಂಕದಲ್ಲಿ ಜನತೆ - ವಿಜಯಪುರ ಜಿಲ್ಲೆಯಲ್ಲಿ ಭೂಮಿ ಕಂಪಿಸಿದ ಅನುಭವ

ವಿಜಯಪುರ(Vijayapur) ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ, ಘೋಣಸಗಿ, ಸೋಮ ದೇವರಹಟ್ಟಿ, ಮಲಕನ ದೇವರಹಟ್ಟಿ, ಸಿದ್ದಾಪುರ ಭಾಗದಲ್ಲಿ ಮತ್ತೊಮ್ಮೆ ಭೂಮಿ ಕಂಪಿಸಿದ(Earthquake) ಅನುಭವವಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

By

Published : Nov 22, 2021, 7:02 AM IST

ವಿಜಯಪುರ:ಜಿಲ್ಲೆಯಲ್ಲಿ ಮತ್ತೆ ಭೂಮಿ ಕಂಪಿಸಿದ ಅನುಭವವಾಗಿದೆ.‌ ಭಾನುವಾರ ರಾತ್ರಿ 10-50ರ ಸುಮಾರಿಗೆ ಜಿಲ್ಲೆಯ ತಿಕೋಟಾ ತಾಲೂಕಿನ ಕಳ್ಳಕವಟಗಿ, ಘೋಣಸಗಿ, ಸೋಮ ದೇವರಹಟ್ಟಿ, ಮಲಕನ ದೇವರಹಟ್ಟಿ, ಸಿದ್ದಾಪುರ ಭಾಗದಲ್ಲಿ ಭೂಕಂಪನದ(Earthquake) ಅನುಭವವಾಗಿದೆ ಎಂದು ತಿಳಿದು ಬಂದಿದೆ.‌

ಭೂಮಿಯಿಂದ ಜೋರಾದ ಶಬ್ದ ಹೊರಬಂದ ಕಾರಣ ಗಾಬರಿಗೊಂಡ ಜನರು ಮನೆಯಿಂದ ಹೊರಗೆ ಬಂದಿದ್ದಾರೆ.‌ ಕೆಲವು ಕಡೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಅಲುಗಾಡಿದ ಅನುಭವವಾಗಿದೆ. ಕಳೆದ ಸೆ. 4ರಂದು ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಮೊದಲು ಬಾರಿ ಭೂಮಿ ಕಂಪಿಸಿದ ಅನುಭವವಾಗಿತ್ತು.

ನಂತರ ಇಲ್ಲಿಯವರೆಗೆ 6-7 ಬಾರಿ ಭೂಮಿ ಕಂಪಿಸಿದ ಅನುಭವಾಗಿದೆ. ಬಸವನಬಾಗೇವಾಡಿ, ವಿಜಯಪುರ, ಕೊಲ್ಹಾರ ಹಾಗೂ ತಿಕೋಟಾ ತಾಲೂಕಿನ ಹಲವು ಗ್ರಾಮಗಳಲ್ಲಿ ಭೂಮಿ ಕಂಪಿಸಿದ ಅನುಭವಾಗಿದೆ. ಗ್ರಾಮಸ್ಥರ ಆತಂಕ ಹೋಗಲಾಡಿಸಲು ನೈಸರ್ಗಿಕ ವಿಕೋಪದ ತಜ್ಞರ ತಂಡ ಇಲ್ಲಿಯವರೆಗೆ 3 ಬಾರಿ ಭೂಮಿ ಕಂಪಿಸಿದ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ಪ್ರಾಥಮಿಕ ವರದಿಯಂತೆ ಭೂಮಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಈ ರೀತಿ ಕಂಪನದ ಅನುಭವವಾಗಿದೆ. ಇದಕ್ಕೆ ಯಾರೂ ಹೆದರುವ ಅವಶ್ಯಕತೆ ಇಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಸಂಬಂಧ ಜಿಲ್ಲಾಡಳಿತದ ಜತೆ ಸಭೆ ನಡೆಸಲಾಗಿದೆ. ಆದರೆ, ಇಲ್ಲಿಯವರೆಗೆ ಪ್ರಾಥಮಿಕ ವರದಿ ಮಾತ್ರ ನೀಡಿಲ್ಲ. ನಿನ್ನೆ (ಭಾನುವಾರ) ಮತ್ತೊಮ್ಮೆ ಭೂಮಿ ಕಂಪಿಸಿದ ಅನುಭವವಾಗಿದ್ದು, ಗ್ರಾಮಸ್ಥರು ಆತಂಕದಲ್ಲಿದ್ದಾರೆ.

ಇದನ್ನೂ ಓದಿ:ಪ್ರತಾಪ್​ ಸಿಂಹ ವಿರುದ್ಧ ಮಹಂತಾ ಶಿವಾಚಾರ್ಯ ಶ್ರೀಗಳ ಹೇಳಿಕೆಗೆ ಸಿದ್ದಲಿಂಗ ಸ್ವಾಮೀಜಿ ಖಂಡನೆ

ABOUT THE AUTHOR

...view details