ಕರ್ನಾಟಕ

karnataka

ETV Bharat / state

ವಿಜಯಪುರದಲ್ಲಿ ಮತ್ತೆ ಭೂಕಂಪನ: ಸೋಮವಾರ ಒಂದೇ ದಿನ 3 ಬಾರಿ ಗಡ ಗಡ - ವಿಜಯಪುರ ಭೂಮಿಯಲ್ಲಿ ಶಬ್ದ

ಸೋಮವಾರ ವಿಜಯಪುರದಲ್ಲಿ ಮತ್ತೆ ಭೂಕಂಪನವಾಗಿದೆ. ಈ ಮೂಲಕ ಸತತ ಮೂರನೇ ದಿನವೂ ಜನರಲ್ಲಿ ಆತಂಕ ಮನೆ ಮಾಡಿತ್ತು.

ವಿಜಯಪುರದಲ್ಲಿ ಮತ್ತೆ ಭೂಕಂಪನ
ವಿಜಯಪುರದಲ್ಲಿ ಮತ್ತೆ ಭೂಕಂಪನ

By

Published : Aug 23, 2022, 7:42 AM IST

ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ ಮೂರು ಬಾರಿ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ನಿನ್ನೆ ಸಾಯಂಕಾಲ 4:26, ರಾತ್ರಿ 9.22 ಮತ್ತು 11.04 ಗಂಟೆಯ ಸುಮಾರಿಗೆ ಭೂಮಿ ನಡುಗಿರುವ ಅನುಭವವಾಗಿದೆ.

ನಗರದ ರೈಲ್ವೆ ನಿಲ್ದಾಣ, ಗೋಳಗುಮ್ಮಟ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭೂಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ತೀವ್ರತೆ ದಾಖಲಾಗಿತ್ತು. ‌ಭೂಮಿಯ 10 ಕೀಮೀ ಆಳದಲ್ಲಿ ತರಂಗಗಳು ಸೃಷ್ಟಿಯಾಗಿವೆ. ಭೂಮಿಯಲ್ಲಿ ಶಬ್ದ ಕೇಳಿಬಂದಿದೆ. ಮೇಲಿಂದ ಮೇಲೆ ಜಿಲ್ಲೆಯಲ್ಲಿ ಭೂಕಂಪನವಾಗುತ್ತಿದ್ದು, ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಡಾ.ವಿಜಯ ಮಹಾಂತೇಶ ದಾನಮ್ಮನವರ ತಿಳಿಸಿದರು.

ಇತ್ತೀಚೆಗೆ ಜಿಲ್ಲೆಯಲ್ಲಿ ಆಗಾಗ್ಗೆ ಭೂಕಂಪವಾಗುತ್ತಿದೆ. ಶನಿವಾರ, ಭಾನುವಾರದಂದು ಕೂಡ ಭೂಮಿ ನಡುಗಿದ್ದು, ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆ ದಾಖಲಾಗಿತ್ತು. ನಿನ್ನೆ ಕೂಡ ಮತ್ತೆ ಕೆಲವೆಡೆ ಭೂಕಂಪನವಾಗಿದೆ.

ಇದನ್ನೂ ಓದಿ: ವಿಜಯಪುರ ಕಾಂಗ್ರೆಸ್ ಕಚೇರಿಗೆ ವೀರ ಸಾವರ್ಕರ್ ಫೋಟೋ ಅಂಟಿಸಿ ಕಿಡಿಗೇಡಿಗಳು ಪರಾರಿ

ABOUT THE AUTHOR

...view details