ಕರ್ನಾಟಕ

karnataka

ETV Bharat / state

ಗುಮ್ಮಟ ನಗರಿಯಲ್ಲಿ‌ ಮತ್ತೆ ಭೂಕಂಪನದ ಅನುಭವ.. ಭಾರಿ ಸದ್ದಿಗೆ ಬೆಚ್ಚಿಬಿದ್ದ ಗ್ರಾಮಸ್ಥರು - ಸ್ಪೋಟದ ರೀತಿಯಲ್ಲಿ ಕೇಳಿ ಬಂದ ಜೋರಾದ ಶಬ್ಧ

ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭಾರಿ ಸದ್ದು, ಭೂಕಂಪನದ ಅನುಭವ.. ಮನೆಯಿಂದ ಹೊರ ಓಡಿ ಬಂದ ಗ್ರಾಮಸ್ಥರು..

Earthquake effect  Earthquake effect in Vijayapura district  Earthquake in Vijayapura district  ಗುಮ್ಮಟನಗರಿಯಲ್ಲಿ‌ ಮತ್ತೆ ಭೂಕಂಪನ ಅನುಭವ  ಭಾರಿ ಸದ್ದಿಗೆ ಬೆಚ್ಚಿಬಿದ್ದ ಗ್ರಾಮಸ್ಥರು  ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭಾರಿ ಸದ್ದು  ಮನೆಯಿಂದ ಹೊರ ಓಡಿ ಬಂದ ಗ್ರಾಮಸ್ಥರು  ಗುಮ್ಮಟನಗರಿ ಜನರಿಗೆ ಮತ್ತೆ ಭೂಕಂಪನ ಅನುಭವ  ಸ್ಪೋಟದ ರೀತಿಯಲ್ಲಿ ಕೇಳಿ ಬಂದ ಜೋರಾದ ಶಬ್ಧ  ಶಬ್ಧದ ಜೊತೆಗೆ ಕಂಪನದ ಅನುಭವ
ಗುಮ್ಮಟನಗರಿಯಲ್ಲಿ‌ ಮತ್ತೆ ಭೂಕಂಪನ ಅನುಭವ.. ಭಾರಿ ಸದ್ದಿಗೆ ಬೆಚ್ಚಿಬಿದ್ದ ಗ್ರಾಮಸ್ಥರು

By

Published : Feb 25, 2023, 6:44 AM IST

Updated : Feb 25, 2023, 7:47 AM IST

ಗುಮ್ಮಟ ನಗರಿಯಲ್ಲಿ‌ ಮತ್ತೆ ಭೂಕಂಪನದ ಅನುಭವ

ವಿಜಯಪುರ: ಗುಮ್ಮಟನಗರಿ ಜನರಿಗೆ ಮತ್ತೆ ಭೂಕಂಪನದ ಅನುಭವ ಆಗಿದೆ. ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶಗಳಾದ ಕಳ್ಳಕವಟಗಿ, ಘೋಣ ಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಗ್ರಾಮಗಳಲ್ಲಿ ಭೂಕಂಪನದ ಅನುಭವವಾಗಿದೆ. ರಾತ್ರಿ 10.32 ರ ಸುಮಾರಿಗೆ ಭಯಾನಕ ಕಂಪನದ ಅನುಭವ ಜನರನ್ನು‌ಮನೆಯಿಂದ ಓಡುವಂತೆ ಮಾಡಿದೆ.

ಸ್ಪೋಟದ ರೀತಿ ಕೇಳಿ ಬಂದ ಜೋರಾದ ಶಬ್ಧದ ಜೊತೆಗೆ ಕಂಪನದ ಅನುಭವ ಸಹ ಆಗಿದೆ.‌ ಭಯಾನಕ ಸದ್ದಿಗೆ ಹೆದರಿ ಜನ ಹೊರಗೆ ಓಡಿ ಬಂದಿದ್ದಾರೆ. ಈ ಹಿಂದಿನಿಗಿಂತಲು ಅತಿ ಭಯಾನಕವಾಗಿ ಕೇಳಿ ಬಂದ ಸ್ಫೋಟದ ರೀತಿಯ ಸದ್ದು ಹಾಗೂ ಕಂಪನ ಅನುಭವ ಇದಾಗಿತ್ತು. ಭೂಕಂಪನ ಸದ್ದಿಗೆ ‌ನಾಯಿಗಳು ಸೇರಿದಂತೆ ಮೂಖ ಪ್ರಾಣಿಗಳ ಜೋರಾಗಿ ಕೂಗಾಟ‌ ನಡೆಸಿದ್ದವು. ಮನೆಯಲ್ಲಿದ್ದ ವಸ್ತುಗಳು ಕೆಲವು‌ ಕಡೆ ಅಲುಗಾಡಿ ಕೆಳಗೆ ಬಿದ್ದಿದೆ. ಈ ಕುರಿತು ಅಧಿಕಾರಿಗಳಿಂದ ಯಾವುದೇ ಮಾಹಿತಿ ಇನ್ನು ಲಭ್ಯವಾಗಿಲ್ಲ. ಈ ಬಗ್ಗೆ ಅಧಿಕಾರಿಗಳ ಪ್ರತಿಕ್ರಿಯೆ ಬಗ್ಗೆ ತಿಳಿದು ಬರಬೇಕಾಗಿದೆ.

ಓದಿ:ಚೀನಾ ಗಡಿ ಬಳಿಯ ತಜಕಿಸ್ತಾನದಲ್ಲಿ 6.8 ತೀವ್ರತೆಯ ಭೂಕಂಪ

ಮಳೆಯ ಕಾರಣ ನೀಡಿದ್ದ ಅಧಿಕಾರಿಗಳು:ಈ ಹಿಂದೆ ಆಗಸ್ಟ್​ 2022ರಲ್ಲಿ ವಿಜಯಪುರ ಜಿಲ್ಲೆಯ ಭೂಕಂಪನ ಪೀಡಿತ ಪ್ರದೇಶಗಳಿಗೆ ನೈಸರ್ಗಿಕ ವಿಕೋಪ ಪರಿಶೀಲನಾ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನದ ಅನುಭವವಾಗುತ್ತಿರುವುದಕ್ಕೆ ಆಲಮಟ್ಟಿ ಜಲಾಶಯ ಭರ್ತಿ ಹಾಗೂ ಎನ್‌ಟಿಪಿಸಿ ಕಾರಣವಲ್ಲ ಎಂದು ನೈಸರ್ಗಿಕ ವಿಕೋಪ ಪರಿಶೀಲನಾ ತಂಡದ ಹಿರಿಯ ವೈಜ್ಞಾನಿಕ ಅಧಿಕಾರಿ ಜಗದೀಶ ಈ ಹಿಂದೆ ಸ್ಪಷ್ಟಪಡಿಸಿದ್ದರು.

ವಿಜಯಪುರ ಜಿಲ್ಲೆಯ ಭೂಕಂಪನಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷ ಉತ್ತಮ ಮಳೆಯಾಗಿದೆ. ಮಳೆ ಹೆಚ್ಚಾದಾಗ ಮಾತ್ರ ಭೂಕಂಪನದ ಅನುಭವ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಹಾಗೆ ನೋಡಿದರೆ ಜಿಲ್ಲೆ ಬರಗಾಲ ಪೀಡಿತ ಪ್ರದೇಶ. ಈಗ ಮಳೆ ಪ್ರಮಾಣ ಹೆಚ್ಚಾಗಿರುವ ಕಾರಣ ಒಣಪ್ರದೇಶದಲ್ಲಿ ನೀರು ಹೆಚ್ಚು ನುಗ್ಗಿದ್ದು, ಕಲ್ಲಿನ ಪದರಗಳು ಅಲುಗಾಡುತ್ತವೆ. ಇದರಿಂದ ದೊಡ್ಡ ಶಬ್ಧ ಬರುವ ಕಾರಣ ಕಂಪನ ಸೃಷ್ಟಿಯಾಗುತ್ತಿದೆ ಅಂತಾ ಹೇಳಿದ್ದರು.

ಓದಿ:ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ; ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ

ತಮಿಳುನಾಡಿನಲ್ಲಿ ಭೂಕಂಪನದ ಅನುಭವ:ಕೆಲ ದಿನಗಳ ಹಿಂದೆ ಅಂದ್ರೆ ಫೆಬ್ರುವರಿ 22ರಂದುಚೆನ್ನೈ ನಗರದ ಅಣ್ಣಾಸಲೈ ಬಳಿಯ ಮೌಂಟ್ ರಸ್ತೆಯಲ್ಲಿರುವ ಬಹುಮಹಡಿ ಕಟ್ಟಡಗಳಲ್ಲಿ ಇಂದು ಜನರಿಗೆ ನಿಗೂಢ ಕಂಪನದ ಅನುಭವವಾಗಿತ್ತು. ಹತ್ತಿರದ ಇತರ ಯಾವುದೇ ಕಟ್ಟಡಗಳಲ್ಲಿ ಕಂಪನ ಆಗದೇ ಇರುವುದು ಅಚ್ಚರಿಗೆ ಕಾರಣವಾಗಿತ್ತು. ಘಟನೆಗೆ ಮೆಟ್ರೋ ಕಾಮಗಾರಿ ಕಾರಣ ಎಂದು ಸ್ಥಳೀಯರು ಹೇಳಿದ್ದರು. ಆದರೆ, ಭೂಕಂಪನಕ್ಕೂ ಮೆಟ್ರೋ ಕಾಮಗಾರಿಗೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದರು.

Last Updated : Feb 25, 2023, 7:47 AM IST

ABOUT THE AUTHOR

...view details