ವಿಜಯಪುರ: ಸಾರ್ವಜನಿಕರ ಆರೋಗ್ಯದ ಮೇಲೆ ಪರಿಣಾಮ ಉಂಟು ಮಾಡುತ್ತಿರುವ ಸುಣ್ಣ ಬಟ್ಟಿ ತೆರವುಗೊಳಿಸುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು.
ಸುಣ್ಣ ಬಟ್ಟಿ ತೆರವುಗೊಳಿಸುವಂತೆ ಆಗ್ರಹಿಸಿ ಡಿಎಸ್ಎಸ್ ಪ್ರತಿಭಟನೆ ನಗರದ ರಜಪೂತ ಗಲ್ಲಿಯಲ್ಲಿರುವ ಸುಣ್ಣದ ಬಟ್ಟಿ ಅಕ್ರಮವಾಗಿ ನಡೆಸಲಾಗುತ್ತಿದ್ದು ಬಟ್ಟಿಯಿಂದ ಹೊರ ಸೂಸುವ ಹೊಗೆಯಿಂದ ಸಾರ್ವಜನಿಕರ ಆರೋಗ್ಯಕ್ಕೆ ಕುತ್ತು ಬರುತ್ತಿದ್ದು ಕ್ಷಯರೋಗ, ಟಿಬಿ ಸೇರಿದಂತೆ ಅನೇಕ ರೋಗಗಳ ಭೀತಿ ಎದುರಾಗಿದೆ.
ಇನ್ನು ಸುಣ್ಣದ ಬಟ್ಟಿಯಿಂದ ಪರಿಸರ ಹಾನಿಯಲ್ಲದೆ ನಡು ಊರಿನಲ್ಲಿ ಬಟ್ಟಿ ನಡೆಸಲಾಗುತ್ತಿದೆ. ಹಲವು ಬಾರಿ ಸಾರ್ವಜನಿಕರು ಸುಣ್ಣ ಬಟ್ಟಿ ಬಂದ್ ಮಾಡುವಂತೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಡಿಎಸ್ಎಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದರು.
ಇನ್ನೂ ಅನಧಿಕೃತವಾಗಿ ನಡು ಊರಲ್ಲಿ ಸುಣ್ಣ ಬಟ್ಟಿ ನಡೆಸಲಾಗುತ್ತಿದ್ದು, ಸಾರ್ವಜನಿಕರಿಗೆ ಮಾರಕವಾಗಿರುವ ಸುಣ್ಣ ಬಟ್ಟಿ ಮಾಲೀಕನ ವಿರುದ್ಧ ಕ್ರಮಕ್ಕೆ ಮುಂದಾಗುವಂತೆ ಡಿಎಸ್ಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.