ಕರ್ನಾಟಕ

karnataka

ETV Bharat / state

ಐಪಿಎಸ್ ಅಧಿಕಾರಿ ಫೋಟೋ ಬಳಸಿದ ಚಾಲಕನಿಗೆ ದಂಡ - ವಿಜಯಪುರದಲ್ಲಿ ಚಾಲಕನಿಗೆ ದಂಡ

ಓಮಿನಿ ಕಾರ್ ಹಿಂಭಾಗ ಎಸ್​​ಪಿ ರವಿ ಡಿ ಚೆನ್ನಣ್ಣನವರ ಫೋಟೋ ಹಾಕಿಕೊಂಡು ಓಡಾಡುತ್ತಿದ್ದಿ ಯಾಕೆ ಎಂದು ಕೇಳಿದಾಗ, ಕಾರ್ ಚಾಲಕ, ಇಲ್ಲ ಸರ್, ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ..

fine
fine

By

Published : May 15, 2021, 8:22 PM IST

Updated : May 15, 2021, 10:35 PM IST

ವಿಜಯಪುರ : ಕೊರೊನಾ ಮಹಾಮಾರಿ ಹಿನ್ನೆಲೆ ರಾಜ್ಯದಲ್ಲಿ ಜಾರಿಯಾಗಿರುವ ಲಾಕ್​​ಡೌನ್‌ನಲ್ಲಿ ವ್ಯಕ್ತಿಯೊಬ್ಬ ಐಪಿಎಸ್ ಅಧಿಕಾರಿಯೊಬ್ಬರ ಪೋಟೋವನ್ನು ತನ್ನ ಕಾರು ಹಿಂಬದಿ ಅಂಟಿಸಿಕೊಂಡು ಕಿರಾಣಿ ವಸ್ತು ತಗೆದುಕೊಂಡು ಹೋಗುವಾಗ ಪೊಲೀಸರಿಗೆ ಸಿಕ್ಕಿ ಹಾಕಿಕೊಂಡು ದಂಡ ತೆತ್ತ ಘಟನೆ ನಗರದಲ್ಲಿ ನಡೆದಿದೆ.

ನಗರದ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಕಾರು ಅಡ್ಡಗಟ್ಟಿದ್ದಾರೆ. ಆ ಕಾರಿನ ಹಿಂಭಾಗದ ಗ್ಲಾಸ್​​ಗೆ ಎಸ್​ಪಿ ರವಿ ಡಿ.ಚೆನ್ನಣ್ಣನವರ ಫೋಟೋ ಹಾಕಿಕೊಂಡು ಹೋಗುತ್ತಿದ್ದ ವಾಹನ ಚಾಲಕನನ್ನು ವಿಚಾರಿಸಿದ್ದಾರೆ.

ಐಪಿಎಸ್ ಅಧಿಕಾರಿ ಫೋಟೋ ಬಳಸಿದ ಚಾಲಕನಿಗೆ ದಂಡ

ಓಮಿನಿ ಕಾರ್ ಹಿಂಭಾಗ ಎಸ್​​ಪಿ ರವಿ ಡಿ ಚೆನ್ನಣ್ಣನವರ ಫೋಟೋ ಹಾಕಿಕೊಂಡು ಓಡಾಡುತ್ತಿದ್ದಿ ಯಾಕೆ ಎಂದು ಕೇಳಿದಾಗ, ಕಾರ್ ಚಾಲಕ, ಇಲ್ಲ ಸರ್, ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ. ಇದರಿಂದ ಆಕ್ರೋಶಗೊಂಡ ಪೊಲೀಸರು ಕಾರು ಕೀ ಕಸಿದುಕೊಂಡು 500 ರೂ. ದಂಡ ಭರಿಸಿಕೊಂಡು ಕಾರು ಬಿಟ್ಟು ಕಳುಹಿಸಿದ್ದಾರೆ.

Last Updated : May 15, 2021, 10:35 PM IST

ABOUT THE AUTHOR

...view details