ಕರ್ನಾಟಕ

karnataka

ETV Bharat / state

ವಿಜಯಪುರ: ಮುಳುಗಿದ ಸೇತುವೆ ಮೇಲೆ ಬಸ್ ಸಂಚಾರ; ಚಾಲಕ, ನಿರ್ವಾಹಕ ಅಮಾನತು - Etv Bharat kannada

ವಿಜಯಪುರ ಜಿಲ್ಲೆಯ ಡೋಣಿ ನದಿಯಲ್ಲಿ ಪ್ರವಾಹ ಉಂಟಾಗಿ ಇಲ್ಲಿನ ಸೇತುವೆ ಮುಳುಗಡೆಯಾಗಿದ್ದು ಸೇತುವೆ ಮೇಲೆ ಸರ್ಕಾರಿ ಬಸ್ ಚಲಾಯಿಸಿ ದುಸ್ಸಾಹಸ ಮೆರೆದಿದ್ದ ಬಸ್ ಚಾಲಕ ಮತ್ತು ನಿರ್ವಾಹಕರನ್ನು ಅಮಾನತುಗೊಳಿಸಲಾಗಿದೆ.

driver-and-conductor-suspended-for-driving-bus-on-flooded-bridge
ವಿಜಯಪುರ: ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ, ನಿರ್ವಾಹಕ ಅಮಾನತು

By

Published : Aug 7, 2022, 9:00 AM IST

ವಿಜಯಪುರ: ಮಳೆಯಿಂದ ಜಲಾವೃತವಾಗಿದ್ದ ಸೇತುವೆ ಮೇಲೆ ಸರ್ಕಾರಿ ಬಸ್ ಚಲಾಯಿಸಿ ದುಸ್ಸಾಹಸ ಮೆರೆದಿದ್ದ ಚಾಲಕ ಹಾಗೂ ನಿರ್ವಾಹಕನನ್ನು ಅಮಾನತು ಮಾಡಿ ಬಾಗಲಕೋಟೆಯ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣ ಅಧಿಕಾರಿ ನಿತಿನ್ ಹೆಗಡೆ ಆದೇಶ ಹೊರಡಿಸಿದ್ದಾರೆ.

ವಿಜಯಪುರ: ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿದ ಚಾಲಕ, ನಿರ್ವಾಹಕ ಅಮಾನತು

ಜಿಲ್ಲೆಯ ದೇವರಹಿಪ್ಪರಗಿಯ ಸಾತಿಹಾಳದ ಸೇತುವೆ ಪ್ರವಾಹದಿಂದಾಗಿ ಮುಳುಗಡೆಯಾಗಿತ್ತು. ಇದನ್ನು ಲೆಕ್ಕಿಸದ ಬಾಗಲಕೋಟೆ ಡಿಪೋದ ಕೆಎಸ್ ಆರ್ ಟಿಸಿ ಬಸ್ ಚಾಲಕ ಮುಳುಗಿದ್ದ ಸೇತುವೆ ಮೇಲೆ ಬಸ್ ಚಲಾಯಿಸಿದ್ದನು. ಈ ಬಗ್ಗೆ ಕ್ರಮ ಕೈಗೊಂಡಿರುವ ಬಾಗಲಕೋಟೆಯ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಸ್ ಚಾಲಕ ಎಂ.ಎಂ.ಪತ್ತಾರ ಹಾಗೂ ನಿರ್ವಾಹಕ ಆರ್.ಎಂ.ಕುಲಕರ್ಣಿ ಅವರನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ:ಮುಳುಗಡೆಯಾದ ಸೇತುವೆ ಮೇಲೆ ಬಸ್ ಚಲಾಯಿಸಿ ದುಸ್ಸಾಹಸ ಮೆರೆದ ಚಾಲಕ

ABOUT THE AUTHOR

...view details