ವಿಜಯಪುರ: ಜಿಲ್ಲೆಯ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಸೋಮವಾರ ನಡೆದ ಜೋಡಿ ಕೊಲೆಗೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬೂದಿಹಾಳ ಗ್ರಾಮದಲ್ಲಿ ರಾಜಶ್ರೀ ಬಿರಾದಾರ ಹಾಗೂ ಈಕೆಯ ಸಹೋದರ ನಾನಾಗೌಡನ್ನು ಕೊಲೆ ಮಾಡಲಾಗಿತ್ತು. ಈ ಸಂಬಂಧ ಕೊಲೆಯಾದ ರಾಜಶ್ರೀ ಪತಿ ಶಂಕರಗೌಡ ಬಿರಾದಾರ, ಈತನ ತಂದೆ ಅಪ್ಪಾಸಾಹೇಬ ಬಿರಾದಾರ, ನಾಗಮ್ಮ ಬಿರಾದಾರ, ಶಂಕರಗೌಡನ ಸಹೋದರ ಸಂಗಣ್ಣ ಬಿರಾದಾರ ಹಾಗೂ ಮಂಜುನಾಥ ಬಿರಾದಾರ ವಿರುದ್ಧ ಸಿಂದಗಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ.