ವಿಜಯಪುರ: ಕೊರೊನಾ ಅಲೆ ಜಿಲ್ಲೆಯಲ್ಲಿ ದಿನೆ ದಿನೇ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರಲ್ಲಿ ಪಾಸಿಟಿವ್ ಹೆಚ್ಚಾಗಿ ಕಂಡು ಬರುತ್ತಿರುವ ಕಾರಣ ವಿಜಯಪುರ ಜಿಲ್ಲಾಡಳಿತ ಮಹಾರಾಷ್ಟ್ರದಿಂದ ಬರುವ ಪ್ರಯಾಣಿಕರು ಕಡ್ಡಾಯವಾಗಿ ಕೊರೊನಾ ನೆಗೆಟಿವ್ ವರದಿ ತರಬೇಕು ಎಂಬ ನಿಯಮ ಜಾರಿಗೊಳಿಸಿದೆ. ಆದರೆ ಇದಕ್ಕೆ ಕೇಂದ್ರ ರೈಲ್ವೆ ಇಲಾಖೆ ಕಡೆಯಿಂದ ಸರಿಯಾಗಿ ಸ್ಪಂದನೆ ದೊರೆಯದ ಕಾರಣ ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡಬೇಕಾಗಿದೆ.
ಕೋವಿಡ್ ಎರಡನೇ ಅಲೆ.. ವಿಜಯಪುರ ರೈಲು ನಿಲ್ದಾಣದಲ್ಲಿ ಕೊರೊನಾಗೆ ಡೋಂಟ್ ಕೇರ್ - Don't Care for Corona at Vijayapur Railway Station
ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ ರೈಲಿನಲ್ಲಿ ಬರುವ ಪ್ರಯಾಣಿಕರನ್ನು ರೈಲು ಸಿಬ್ಬಂದಿ ಪರೀಕ್ಷಿಸಿ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕರ್ನಾಟಕ ಎಂಟ್ರಿ ನೀಡಲು ಸೂಚನೆ ನೀಡಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಕೊರೊನಾ ಎರಡನೇ ಅಲೆ ಆರಂಭವಾಗುತ್ತಿದ್ದಂತೆ ಅದನ್ನು ತಡೆಯಲು ಜಿಲ್ಲಾಡಳಿತ ಮೊದಲು ಮಹಾರಾಷ್ಟ್ರ ಗಡಿಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕರ್ನಾಟಕಕ್ಕೆ ಎಂಟ್ರಿ ಕೊಡುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದೆ. ಅತಿ ಅವಶ್ಯವಿರುವವರು ಕೊರೊನಾ ನೆಗಟಿವ್ ವರದಿ ತೆಗೆದುಕೊಂಡು ಬರಲು ಸೂಚಿಸಿದೆ. ರಸ್ತೆ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಿದ್ದರೂ ಸಹ ರೈಲು ಮಾರ್ಗದ ಮೂಲಕ ಜನ ಕರ್ನಾಟಕಕ್ಕೆ ಸಲೀಸಾಗಿ ಎಂಟ್ರಿ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರದ ಗೈಡ್ಲೈನ್ಸ್ ಪ್ರಕಾರ ರೈಲಿನಲ್ಲಿ ಬರುವ ಪ್ರಯಾಣಿಕರನ್ನು ರೈಲು ಸಿಬ್ಬಂದಿ ಪರೀಕ್ಷಿಸಿ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಕರ್ನಾಟಕ ಎಂಟ್ರಿ ನೀಡಲು ಸೂಚನೆ ನೀಡಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಪಿ. ಸುನೀಲಕುಮಾರ ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಆದರೆ ವಿಜಯಪುರ ರೈಲು ನಿಲ್ದಾಣದಲ್ಲಿ ಹೊರ ಬರುವ ಪ್ರಯಾಣಿಕರು ಕಾಟಾಚಾರಕ್ಕೆ ಮಾಸ್ಕ್ ಹಾಕಿಕೊಂಡಿದ್ದರು. ಇನ್ನೂ ಹಲವರು ಮಾಸ್ಕ್ ಹಾಕದೇ ರಾಜಾರೋಷವಾಗಿ ನಿಲ್ದಾಣದಿಂದ ಹೊರಬರುವದು ಕಂಡುಬಂತು. ಸೌಜನ್ಯಕ್ಕಾದರೂ ಪ್ರಯಾಣಿಕರನ್ನು ತಪಾಸಣೆ ಮಾಡುವುದಾಗಲಿ, ಅವರ ಬಳಿ ನೆಗೆಟಿವ್ ವರದಿ ಇರುವ ಕುರಿತು ಖಚಿತ ಪಡಿಸಿಕೊಳ್ಳಲು ಯಾರೊಬ್ಬ ರೈಲ್ವೆ ಅಧಿಕಾರಿ ಇರಲಿಲ್ಲ. ರೈಲಿನಿಂದ ಬಂದ ಪ್ರಯಾಣಿಕರು ಇದನ್ನು ನೋಡಿ ಅಚ್ಚರಿ ಪಟ್ಟರು. ಪುಣೆಯಲ್ಲಿ ನೆಗೆಟಿವ್ ವರದಿ ತಪಾಸಣೆ ಮಾಡಿ, ಸ್ವ್ಯಾಬ್ ಟೆಸ್ಟ್ ಸಹ ಮಾಡಲಾಗಿತ್ತು. ಆದರೆ ಕರ್ನಾಟಕಕ್ಕೆ ಎಂಟ್ರಿ ಕೊಟ್ಟ ಮೇಲೆ ಯಾರೊಬ್ಬ ಅಧಿಕಾರಿಯೂ ಈ ಬಗ್ಗೆ ಕೇಳಲ್ಲ. ಕೆಲ ಪ್ರಯಾಣಿಕರು ಅರ್ಜೆಂಟ್ ಆಗಿ ರೈಲು ಹತ್ತಿದ್ದೇವೆ ನೆಗಟಿವ್ ವರದಿ ಇಲ್ಲ ಎಂದು ರಾಜೋರೋಷವಾಗಿ ಹೇಳಿದರೂ ಸಹ ಅವರನ್ನು ಪರೀಕ್ಷೆಗೆ ಒಳಪಡಿಸುತ್ತಿಲ್ಲ.