ಕರ್ನಾಟಕ

karnataka

ETV Bharat / state

ನಾಯಿ ಬರ್ತ್​ಡೇಗೆ ಊರಿಗೆಲ್ಲಾ ಊಟ ಹಾಕ್ಸಿ, ಚಿನ್ನದ ಸರ ಉಡುಗೊರೆ ಕೊಟ್ಟ ಬಿಎಂಟಿಸಿ ನೌಕರ - ಶ್ವಾನದ ಬರ್ತ್​ಡೇ ಆಚರಣೆ ಲೇಟೆಸ್ಟ್​​ ಸುದ್ದಿ

ವಿಜಯಪುರ ಜಿಲ್ಲೆಯಲ್ಲಿ ಶ್ವಾನಪ್ರಿಯರೊಬ್ಬರು ಶ್ವಾನದ ಹುಟ್ಟುಹಬ್ಬವನ್ನು ಕೂಡ ಬಹಳ ಅದ್ಧೂರಿಯಾಗಿ ಆಚರಿಸಿದ್ದು, ಶ್ವಾನಕ್ಕೆ ಚಿನ್ನದ ಸರ ಗಿಫ್ಟ್​​ ನೀಡಿದ್ದಾರೆ.

dog
ಶ್ವಾನದ ಹುಟ್ಟುಹಬ್ಬ ಆಚರಣೆ

By

Published : Dec 30, 2019, 5:29 PM IST

Updated : Dec 30, 2019, 5:58 PM IST

ವಿಜಯಪುರ:ತಾನು ಸಾಕಿದ್ದ ಶ್ವಾನದ ಹುಟ್ಟುಹಬ್ಬಕ್ಕೆ ಜುನಾಗಢ ಮಹಾರಾಜ ಕೋಟ್ಯಂತರ ರೂ. ಖರ್ಚು ಮಾಡಿದ್ದು ಇತಿಹಾಸದಲ್ಲಿ ದಾಖಲಾಗಿದೆ. ಅದನ್ನು ನೆನಪಿಸುವಂಥ ಪ್ರಕರಣವೊಂದು ವಿಜಯಪುರದಲ್ಲಿ ನಡೆದಿದೆ.

ನಿಡಗುಂದಿಯಲ್ಲಿ ವ್ಯಕ್ತಿಯೊಬ್ಬರು ತಾವು ಸಾಕಿದ್ದ ನಾಯಿಯ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದಾರೆ.

ಶ್ವಾನದ ಹುಟ್ಟುಹಬ್ಬ ಆಚರಣೆ

ನಿಡಗುಂದಿಯ ಶರಣು ಪತ್ರಿ ಎಂಬ ಶ್ವಾನಪ್ರಿಯರು ತಮ್ಮ ಮುದ್ದಿನ ನಾಯಿ ಟೈಗರ್​ನ ಎರಡನೇ ವರ್ಷದ ಬರ್ತ್​ ಡೇ ಆಚರಿಸಿದ್ದು, ಉಡುಗೊರೆಯಾಗಿ ಐದು ತೊಲೆ (50ಗ್ರಾಂ) ಚಿನ್ನದ ಸರ ಗಿಫ್ಟ್ ಹಾಕಿದ್ದಾರೆ.

ಬಿಎಂಟಿಸಿ ನೌಕರರಾಗಿರುವ ಶರಣು ಪತ್ರಿ ಹಾಗೂ ಮಾವ ಸಂಗಯ್ಯ, ಊರಿನವರಿಗೆಲ್ಲಾ ಊಟ ಹಾಕಿಸಿ ತಮ್ಮ ಶ್ವಾನದ ಹುಟ್ಟುಹಬ್ಬ ಆಚರಿಸಿದ್ದಾರೆ. ಟೈಗರ್(ನಾಯಿ) ಹುಟ್ಟುಹಬ್ಬದ ಅಂಗವಾಗಿ 500 ಜನಕ್ಕೆ ಊಟ ಹಾಕಿಸಿದ್ದಾರೆ. ಡಿಸೆಂಬರ್ 28ರಂದು ಈ ಶ್ವಾನದ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ.

Last Updated : Dec 30, 2019, 5:58 PM IST

For All Latest Updates

TAGGED:

ABOUT THE AUTHOR

...view details