ಕರ್ನಾಟಕ

karnataka

ETV Bharat / state

Watch.. ವಿಜಯಪುರದಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ - Dog attack on boy scene captured on CCTV

ವಿಜಯಪುರದ ಕೊಂಚಿಕೊರವರ ಕಾಲೋನಿಯಲ್ಲಿ ನಿನ್ನೆ(ಸೋಮವಾರ) ಸಂಜೆ ಬೀದಿ ನಾಯಿಯೊಂದು ಅಂಗಡಿಯಿಂದ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿದೆ.

Dog attack on boy  scene captured on CCTV
ಬಾಲಕನ ಮೇಲೆ ಬೀದಿ ನಾಯಿ ದಾಳಿ: ಸಿಸಿಟಿವಿ ದೃಶ್ಯಾವಳಿ

By

Published : Jan 18, 2022, 12:30 PM IST

ವಿಜಯಪುರ: ನಗರದಲ್ಲಿ ಬೀದಿ ನಾಯಿಗಳು ಹಾವಳಿ ದಿನೇ ದಿನೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡಿ ನಾಯಿಗಳು ದಾಳಿ ನಡೆಸುತ್ತಿವೆ. ನಗರದಲ್ಲಿ ನಾಯಿಯೊಂದು ಬಾಲಕನ ಮೇಲೆ ದಾಳಿ ನಡೆಸಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.‌

ಬಾಲಕನ ಮೇಲೆ ಬೀದಿ ನಾಯಿ ದಾಳಿ: ಸಿಸಿಟಿವಿ ದೃಶ್ಯಾವಳಿ

ನಗರದ ಕೊಂಚಿಕೊರವರ ಕಾಲೊನಿಯಲ್ಲಿ ನಿನ್ನೆ(ಸೋಮವಾರ) ಸಂಜೆ ಬೀದಿ ನಾಯಿಯೊಂದು ಅಂಗಡಿಯಿಂದ ರಸ್ತೆಯಲ್ಲಿ ಮನೆಗೆ ಹೋಗುತ್ತಿದ್ದ ಬಾಲಕನ ಮೇಲೆ ದಾಳಿ ನಡೆಸಿದೆ. ಪರಿಣಾಮ ಬಾಲಕನ ಕೈ ಹಾಗೂ ಬೆನ್ನಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ನಾಯಿ ದಾಳಿ ನಡೆಸುತ್ತಿರುವುದನ್ನ ನೋಡಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ನಾಯಿ ಓಡಿಸಿ ಬಾಲಕನನ್ನು ರಕ್ಷಿಸಿದ್ದಾರೆ.

ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿರುವ ಕುರಿತು ಮಹಾನಗರ ಪಾಲಿಕೆಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿನ್ನೆಲೆ ನಾಯಿಗಳ ಸಂತಾನ ಹರಣ ಚಿಕಿತ್ಸೆ ಸಹ ನಡೆಸಲಾಗಿದೆ. ಆದರೆ, ಅವುಗಳನ್ನು ಹಿಡಿದು ನಗರ ಪ್ರದೇಶದಿಂದ ಹೊರ ಹಾಕಲು ಆಗುತ್ತಿಲ್ಲ. ಪ್ರಾಣಿ ದಯಾ ಸಂಘದವರಿಂದ ನಾಯಿಗಳನ್ನು ರಕ್ಷಿಸಿ ಎನ್ನುವ ಕೂಗು ಕೇಳಿ ಬಂದಿದೆ.

ಇದನ್ನೂ ಓದಿ:ಗೋವಾದ ಕಾರಂಜೋಲ್‌ ಸಮೀಪ ಹಳಿ ತಪ್ಪಿದ ವಾಸ್ಕೋ - ಡಿ- ಗಾಮಾ ಹೌರಾ ಅಮರಾವತಿ ಎಕ್ಸ್‌ಪ್ರೆಸ್ ರೈಲು

ABOUT THE AUTHOR

...view details