ಕರ್ನಾಟಕ

karnataka

ETV Bharat / state

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ವೈದ್ಯರ ಮನವಿ - Doctors appealed to District Collector

ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯದ ಸರ್ಕಾರಿ ವೈದ್ಯರಿಂದ ಮನವಿ ಸಲ್ಲಿಸಲಾಯಿತು.

Doctors appealed to District Collector to comply with various demands
ವಿವಿಧ ಬೇಡಿಕೆಗಳಿಗೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೆ ವೈದ್ಯರ ಮನವಿ

By

Published : Sep 15, 2020, 6:15 PM IST

ವಿಜಯಪುರ: ಕೊರೊನಾ ಭೀತಿ ನಡೆವೆಯೂ ಸರ್ಕಾರಿ ವೈದ್ಯರು ತಮ್ಮ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿದ್ದಾರೆ. ಆದ್ರೆ ಸರ್ಕಾರ ಮಾತ್ರ ವೈದ್ಯರ ಬೇಡಿಕೆ ಈಡೇರಿಕೆಗೆ ಮುಂದಾಗುತ್ತಿಲ್ಲ. ವೇತನ‌ ಹೆಚ್ಚಳ ಹಾಗೂ ಇತರ ಭತ್ಯೆ ನೀಡುವಂತೆ ರಾಜ್ಯದಲ್ಲಿ ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ರು ಯಾವುದೆ ಕ್ರಮಕ್ಕೆ ಮುಂದಾಗದೆ ಕೇವಲ ಭರವಸೆ ಮಾತುಗಳು ಮಾತ್ರ ನೀಡುತ್ತಿದ್ದಾರೆ. ರಜೆ ಪಡೆಯದೆ ಹಗಲಿರುಳು ರಜೆ ಪಡೆದೆ ಸರ್ಕಾರಿ ವೈದ್ಯರು ಕೊರೊನಾ ಫ್ರಂಟ್​ ಲೈನ್ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತಿದ್ದಾರೆ. ಕೇಂದ್ರ ಸರ್ಕಾರದ ವೈದ್ಯರಿಗೆ ಸಿಗುವ ಸೌಲಭ್ಯ ಹಾಗೂ ವೇತನ ರಾಜ್ಯದ ಸರ್ಕಾರಿ ವೈದ್ಯರಿಗೆ ನೀಡುವಂತೆ ಆಗ್ರಹಿಸಿದರು.

ಇನ್ನೂ ಹೆಚ್ಚಿನ ಅವಧಿ ಕೆಲಸ ಮಾಡಿದ್ರು ಸರ್ಕಾರ ಸರ್ಕಾರಿ ವೈದ್ಯರ ನೆರವಿಗೆ ಬರುತ್ತಿಲ್ಲ. ಸರ್ಕಾರಿ ವೈದ್ಯರಿಗೆ ಸಿಬಿಎಸ್‌ಎಸ್ ಸ್ಕೇಲ್ ನೀಡಬೇಕು ಹಾಗೂ ಕೇಂದ್ರ ಸರ್ಕಾರದ ವೈದ್ಯರಿಗೆ ನೀಡಲಾಗುವ ಎಲ್ಲ ಸೌಲಭ್ಯ ಸರ್ಕಾರಿ ವೈದ್ಯರಿಗೆ ನೀಡಬೇಕು ಈಗಾಗಲೇ ಇತರ ರಾಜ್ಯಗಳಲ್ಲಿ ಸಿಬಿಎಸ್‌ಎಸ್ ಸ್ಕೇಲ್ ಜಾರಿ ಮಾಡಿದ್ರು ರಾಜ್ಯ ಸರ್ಜಾರ ಸರ್ಕಾರ ಮಾಡುತ್ತಿಲ್ಲ‌.

ಸರ್ಕಾರ ಬೇಡಿಕೆ ಈಡೇರಿಕೆಗೆ ಮುಂದಾಗದೆ ಮಲತಾಯಿ ದೋರಣೆ ಮುಂದುವರಿದರೆ ಸರ್ಕಾರಿ ವೈದ್ಯರು ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿ ವೈದ್ಯರ ಸಂಘಟನೆ ಕಾರ್ಯಕರ್ತರು ಜಿಲ್ಲಾ ಪಂಚಾಯತ ಸಿಇಓ ಗೆ ಮನವಿ ಸಲ್ಲಿಸಿದರು.

ABOUT THE AUTHOR

...view details