ವಿಜಯಪುರ:ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದ ಕೂಲಿ ಕಾರ್ಮಿಕನೊಬ್ಬನಿಗೆ ಖಾಸಗಿ ಆಸ್ಪತ್ರೆಯ ವೈದ್ಯನೊಬ್ಬ ಪ್ರಾಥಮಿಕ ಚಿಕಿತ್ಸೆ ನೀಡಿ, ಕರ್ತವ್ಯ ಪ್ರಜ್ಞೆ ಮೆರೆದಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ಪಟ್ಟಣದ ಅಂಬೇಡ್ಕರ್ ಸರ್ಕಲ್ ಬಳಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಅಪಘಾತದಲ್ಲಿ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಿದ ವೈದ್ಯ ರಾಯಚೂರು ಜಿಲ್ಲೆಯಿಂದ ಹಂಗರಗಿ ಗ್ರಾಮಕ್ಕೆ ಕಳೆದ ಮೂರು ತಿಂಗಳ ಹಿಂದೆ ಕೂಲಿ ಕೆಲಸಕ್ಕೆ ಬಂದಿದ್ದ ಸುಧಾಕರ ಅರಳಿ ಎಂಬವರು ವಾಪಸ್ ಸ್ವಂತ ಊರಿಗೆ ತೆರಳಲು ಅಂಬೇಡ್ಕರ್ ಸರ್ಕಲ್ ಬಳಿ ನಿಂತಿದ್ದಾಗ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಕಾಲಿನ ಮೇಲೆ ಹಾಯ್ದು ಹೋಗಿದೆ.
ಇದರಿಂದ ತೀವ್ರ ಗಾಯಗೊಂಡ ಕಾರ್ಮಿಕ ಸುಧಾಕರ ರಸ್ತೆಯಲ್ಲಿ ಬಿದ್ದು ನರಳಾಡುತ್ತಿದ್ದರೂ ಸಹ ಯಾರು ಸಹಾಯಕ್ಕೆ ಬಂದಿರಲಿಲ್ಲ. ಈ ವೇಳೆ ಕ್ಲಿನಿಕ್ನಿಂದ ಮನೆಗೆ ಊಟಕ್ಕೆ ತೆರಳುತ್ತಿದ್ದಾಗ ನೋಡಿದ ವೈದ್ಯ ಡಾ.ಮಿಣಜಗಿ ತಕ್ಷಣ ಸಹಾಯಕ್ಕೆ ದೌಡಾಯಿಸಿದ್ದಾರೆ.
ಓದಿ:ಭಾರತಕ್ಕೆ 174 ರನ್ಗಳ ಭರ್ಜರಿ ಜಯ.. ಐರ್ಲೆಂಡ್ ಸೋಲಿಸಿ ಸೂಪರ್ ಲೀಗ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟ ಭಾರತ!
ಇನ್ನು ವೈದ್ಯ ಮಿಣಜಗಿ ಅಂಬುಲೆನ್ಸ್ಗೆ ಕರೆ ಮಾಡಿದ್ದಾರೆ. ಆದರೆ ಆ್ಯಂಬುಲೆನ್ಸ್ ತಡವಾಗಿದ್ದರಿಂದ ಕೆಲ ಜನರ ಸಹಾಯ ಪಡೆದು ವೈದ್ಯೆ ಡಾ. ಅಮರೇಶ ಮಿಣಜಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕರ್ತವ್ಯ ಪ್ರಜ್ಞೆ ಜತೆ ಮಾನವೀಯತೆ ಮೆರೆದಿದ್ದಾರೆ. ಸದ್ಯ ಗಾಯಾಳು ಸುಧಾಕರ ಅರಳಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೈದ್ಯನ ಕರ್ತವ್ಯ ಪ್ರಜ್ಞೆ ಜನರ ಮೆಚ್ಚುಗೆಗೆ ಕಾರಣವಾಗಿದೆ.