ವಿಜಯಪುರ:ಪತಿಯ ವರ್ತನೆಗೆ ಬೇಸತ್ತ ಆತನ ಮೂರನೇ ಪತ್ನಿ ನ್ಯಾಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು, ನಾಲ್ಕನೇ ಮದುವೆ ತಡೆಯಬೇಕೆಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಇಂದಲವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಪತ್ನಿಯರನ್ನು ಬದಲಿಸುವ ಶೋಕಿ ಹೊಂದಿದ್ದಾನೆಂದು ಆತನ ಪತ್ನಿ ಆರೋಪಿಸಿದ್ದಾರೆ. ಈತನ ಮೊದಲ ಪತ್ನಿಗೆ 8 ವರ್ಷದ ಗಂಡು ಮಗುವಿದ್ದು, ಆಕೆಗೆ ವಿಚ್ಛೇದನ ನೀಡದೆ ಎರಡನೇ ಮದುವೆಯಾಗಿದ್ದ. ಆಕೆಯನ್ನು ಬಿಟ್ಟು ವಿಜಯಪುರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯನ್ನು 8 ವರ್ಷದ ಹಿಂದೆ ಮದುವೆಯಾಗಿದ್ದಾನೆ. ಇಷ್ಟು ಸಾಲದೆಂದು ಬೆಂಗಳೂರಿನ ವಧು-ವರರ ಕೇಂದ್ರದ ಮೂಲಕ ಧಾರವಾಡದ ಮಹಿಳೆಯೊಬ್ಬಳನ್ನು ಮದುವೆಯಾಗಲು ಹೊರಟಿದ್ದರಿಂದ ಆಕ್ರೋಶಗೊಂಡ ಆತನ 3ನೇ ಪತ್ನಿ, ಮದುವೆ ನಿಲ್ಲಿಸಬೇಕೆಂದು ಕೋರಿ ವಿಜಯಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.