ವಿಜಯಪುರ:ನಗರದ ಶ್ರೀ ತುಳಸಿಗಿರೀಶ ಮಧುಮೇಹ ಆಸ್ಪತ್ರೆಯ ವೈದ್ಯ ಡಾ.ಬಾಬು ರಾಜೇಂದ್ರ ನಾಯಕ ಎಂಬವರು ತಮ್ಮ ತಂದೆಯ 10ನೇ ಪುಣ್ಯಸ್ಮರಣೆಯ ನಿಮಿತ್ತವಾಗಿ, ಜಿಲ್ಲೆಯ ನಿಡಗುಂದಿ ತಾಲ್ಲೂಕಿನ ಗಣಿ ಗ್ರಾಮದಲ್ಲಿ ಉಚಿತ ವೈದ್ಯಕೀಯ ಚಿಕಿತ್ಸೆ ಶಿಬಿರ ಹಮ್ಮಿಕೊಂಡಿದ್ದರು.
ತಂದೆಯ ಪುಣ್ಯಸ್ಮರಣೆ ದಿನ ಸಾಮಾಜಿಕ ಕಾರ್ಯ ಮೆರೆದ ವೈದ್ಯ - ಐವತ್ತು ನೆರೆ ಸಂತ್ರಸ್ತರ ಮಕ್ಕಳಿಗೆ ಶಾಲಾ ಕಿಟ್
ತಂದೆಯ ಪುಣ್ಯಸ್ಮರಣೆ ದಿನ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಿದ್ದಲ್ಲದೆ, ಐವತ್ತು ನೆರೆ ಸಂತ್ರಸ್ತರ ಮಕ್ಕಳಿಗೆ ಶಾಲಾ ಕಿಟ್ ವಿತರಿಸಿ ವೈದ್ಯರೊಬ್ಬರು ಸಾಮಾಜಿಕ ಕಾಳಜಿ ಮೆರೆದಿದ್ದಾರೆ.

ವೈದ್ಯ
ಮಧುಮೇಹ ಹಾಗೂ ಹೃದಯ ಸಂಬಂಧಿ ರೋಗಗಳ ತಪಾಸಣೆ ನಡೆಸಲಾಯಿತು. ಈ ಸಂದರ್ಭದಲ್ಲಿ 5 ಜನ ಆದರ್ಶ ಶಿಕ್ಷಕರಿಗೆ ಸನ್ಮಾನಿಸಿ 100 ಗಿಡಗಳನ್ನು ವಿತರಿಸಿದರು. ನೆರೆ ಸಂತ್ರಸ್ತರ 50 ಮಕ್ಕಳಿಗೆ ಶಾಲಾ ಕಿಟ್ ವಿತರಿಸುವ ಮೂಲಕ ನೆರೆ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿ ಮಾನವೀಯತೆ ಮೆರೆದಿದ್ದಾರೆ.
ಸಾಮಾಜಿಕ ಕಾರ್ಯ ಮೆರೆದ ವೈದ್ಯ
ಗಣಿ ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಸ್ಥರು ಶಿಬಿರದ ಉಪಯೋಗ ಪಡೆದುಕೊಂಡರು. ಡಾ.ರಾಜೇಂದ್ರ ಬಾಬು ನಾಯಕ್ ಹಾಗೂ ಡಾ.ಶೀತಲ್ ನಾಯಕ್ ಭಾಗವಹಿಸಿ ಆರೋಗ್ಯ ತಪಾಸಣೆ ಮಾಡಿ ಉಚಿತ ಔಷಧೋಪಚಾರ ನಡೆಸಿದ್ದಾರೆ.