ವಿಜಯಪುರ: ರಾಜಕಾರಣಿಗಳೆಂದರೆ ನಿಮ್ಮ ಜೀತದಾಳುಗಳು ಎಂದು ತಿಳಿದಿದ್ದೀರಾ? ಎಂದು ವಿಜಯಪುರ ನಗರ ಶಾಸಕ ಬಸನಗೌಡ ಯತ್ನಾಳ ಮಾಧ್ಯಮಗಳ ಮೇಲೆ ಸಿಡಿಮಿಡಿಗೊಂಡರು.
ರಾಜಕಾರಣಿಗಳನ್ನು ನಿಮ್ಮ ಜೀತದಾಳೆಂದು ಭಾವಿಸಿದ್ದೀರಾ?: ಬಸನಗೌಡ ಯತ್ನಾಳ್ ಕಿಡಿ - ಬಸನಗೌಡ ಯತ್ನಾಳ್ ಮಾಧ್ಯಮದ ಮೇಲೆ ಕಿಡಿ
ಶಾಸಕ ಬಸನಗೌಡ ಯತ್ನಾಳ್ ಮಾಧ್ಯಮಗಳ ಮೇಲೆ ಗರಂ ಆಗಿದ್ದು, ರಾಜಕಾರಣಿಗಳನ್ನು ನಿಮ್ಮ ಜೀತದಾಳು ಎಂದು ಭಾವಿಸಿದ್ದೀರಾ? ಎಂದು ಕಿಡಿ ಕಾರಿದ್ದಾರೆ.

ಮಾಧ್ಯಮದವರ ಮೇಲೆ ಕಿಡಿಕಾರಿದ ಯತ್ನಾಳ್
ಮಾಧ್ಯಮದವರ ಮೇಲೆ ಕಿಡಿಕಾರಿದ ಯತ್ನಾಳ್
ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಬಗ್ಗೆ ಯತ್ನಾಳ್ ವಿವಾದಿತ ಹೇಳಿಕೆ ವಿಚಾರಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇವೆಲ್ಲವನ್ನು ಗಮನಿಸಿದ ಯತ್ನಾಳ್ ನಗರದ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ವೇಳೆ ಮಾಧ್ಯಮದವರನ್ನು ಕಂಡು ಕೆಂಡಾಮಂಡಲರಾದ್ರು.
ಈ ಕುರಿತು ಕೇಳಲಾದ ಪ್ರಶ್ನೆಗೆ, ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿ ಮುಂದೆ ತೆರಳಿದರು.