ಕರ್ನಾಟಕ

karnataka

ETV Bharat / state

ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸಲು ಸೂಚನೆ: ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ - ತೊಗರಿ ಖರೀದಿ ಕೇಂದ್ರಗಳ ಆರಂಭ ಸುದ್ದಿ ವಿಜಯಪುರ

ತೊಗರಿ ಖರೀದಿ ಕೇಂದ್ರಗಳನ್ನು ಶೀಘ್ರ ಆರಂಭಿಸಲು ನೋಂದಣಿ ಕಾರ್ಯಕ್ಕೆ ತಕ್ಷಣ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

vijayapura
ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ

By

Published : Dec 25, 2019, 2:47 PM IST

ವಿಜಯಪುರ:ತೊಗರಿ ಉತ್ಪನ್ನಗಳಿಗೆ ಬೆಂಬಲ ಬೆಲೆ ಯೋಜನೆಯಡಿ ಕೇಂದ್ರ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನದೊಂದಿಗೆ ತೊಗರಿ ಖರೀದಿ ಕೇಂದ್ರಗಳನ್ನು ಶೀಘ್ರ ಆರಂಭಿಸಲು ನೋಂದಣಿ ಕಾರ್ಯಕ್ಕೆ ತಕ್ಷಣ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ್​ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಕೃಷಿ ಮಾರಾಟ ಇಲಾಖೆ ಬೆಂಬಲ ಬೆಲೆ ಜಿಲ್ಲಾ ಕಾರ್ಯಪಡೆ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ತೊಗರಿ ಉತ್ಪನ್ನಗಳ ಪ್ರತಿ ಕ್ವಿಂಟಲ್‍ಗೆ ರೂ.5,800 ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹ ಧನ ರೂ.300 ಸೇರಿ ಒಟ್ಟು ರೂ 6,100 ರಂತೆ ಬೆಂಬಲ ಬೆಲೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ತೊಗರಿ ಖರೀದಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಯೋಜನೆ ಮಾರ್ಗಸೂಚಿಗಳನ್ವಯ ಪೂರ್ವಸಿದ್ಧತೆ ಮತ್ತು ರೈತರ ನೋಂದಣಿಯನ್ನು 20 ದಿನಗಳವರೆಗೆ ನಿರ್ವಹಿಸಬೇಕು ಎಂದು ಸೂಚಿಸಿದರು.

ತೊಗರಿ ದಾಸ್ತಾನು ಕುರಿತು :

ಬಸವನ ಬಾಗೇವಾಡಿ ಉಪಮಾರುಕಟ್ಟೆ ಪ್ರಾಂಗಣದಲ್ಲಿ 1,500 ಎಂ.ಟಿ ಮತ್ತು ಆಲಮೇಲ ಉಪ ಮಾರುಕಟ್ಟೆಯಲ್ಲಿ 500 ಎಂ.ಟಿ ಸಾಮರ್ಥ್ಯ ಸಮಿತಿಯ ಒಡೆತನದ ಗೋದಾಮುಗಳು ಖಾಲಿ ಇದ್ದು, ಈ ಗೋದಾಮುಗಳಿಗೆ ಸಂಬಂಧಿಸಿದ ಉಗ್ರಾಣ ವ್ಯವಸ್ಥಾಪಕರು ಹಸ್ತಾಂತರ ಪಡೆದುಕೊಂಡು ದಾಸ್ತಾನು ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.

ಒಟ್ಟು ಜಿಲೆಯಲ್ಲಿ 94 ಖರೀದಿ ಕೇಂದ್ರ ತೆರೆಯಲು ಉದ್ದೇಶಿಸಲಾಗಿದೆ. ಕೃಷಿ ಜಂಟಿ ನಿರ್ದೇಶಕರು ಹಾಗೂ ಆಯಾ ತಾಲೂಕುಗಳ ಎಪಿಎಂಸಿ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ. ಖರೀದಿ ಕೇಂದ್ರಗಳ ನೋಂದಣಿ ಮೇಲ್ವಿಚಾರಣೆಗೆ ಸಹಕಾರಿ ಸಂಘಗಳ ಉಪ ನಿಬಂಧಕರು ಹಾಗೂ ಮಾರ್ಕೇಟಿಂಗ್ ಫೆಡರೇಶನ್ ಶಾಖಾ ವ್ಯವಸ್ಥಾಪಕರನ್ನು ನೇಮಿಸಲಾಯಿತು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಸನ್ನ, ಕೃಷಿ ಜಂಟಿ ನಿರ್ದೇಶಕ ಶಿವುಕುಮಾರ ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details