ಕರ್ನಾಟಕ

karnataka

ETV Bharat / state

ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸರ ದಾಳಿ: ಅಕ್ರಮ ವಸ್ತುಗಳು ವಶಕ್ಕೆ - ವಿಜಯಪುರ ದರ್ಗಾ ಜೈಲು

ವಿಜಯಪುರ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿಂದು ದರ್ಗಾ ಜೈಲಿನ ಮೇಲೆ ದಾಳಿ ನಡೆಸಲಾಗಿದ್ದು, ಕಾನೂನು ಬಾಹಿರವಾಗಿಟ್ಟುಕೊಂಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

District police raid on Vijayapura Central Prison
ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸರ ದಾಳಿ...ಅಕ್ರಮ ವಸ್ತುಗಳ ವಶ

By

Published : Sep 24, 2020, 10:45 AM IST

ವಿಜಯಪುರ:ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಇಂದು ಬೆಳಗ್ಗೆ ಜಿಲ್ಲಾ ಪೊಲೀಸರು ದಾಳಿ ನಡೆಸಿದ್ದು, ಅಕ್ರಮವಾಗಿಟ್ಟುಕೊಂಡಿದ್ದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ದರ್ಗಾ ಜೈಲಿನಲ್ಲಿ ಕೈದಿಗಳು ಕಾನೂನು ಬಾಹಿರವಾಗಿ 3 ಮೊಬೈಲ್, ಚಾರ್ಜರ್, ಇಯರ್​​ ಫೋನ್, ತಂಬಾಕು, ಬೀಡಿ ಕಟ್ಟುಗಳನ್ನು ಇಟ್ಟುಕೊಂಡಿದ್ದರು ಎನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ವಿಜಯಪುರ ಎಎಸ್ಪಿ ರಾಮ ಅರಸಿದ್ಧಿ ನೇತೃತ್ವದಲ್ಲಿ ದಾಳಿ ನಡೆಸಿ ಅಕ್ರಮವಾಗಿಟ್ಟುಕೊಂಡಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವಿಜಯಪುರ ಕೇಂದ್ರ ಕಾರಾಗೃಹದ ಮೇಲೆ ಜಿಲ್ಲಾ ಪೊಲೀಸರ ದಾಳಿ

ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಲಾಗಿದ್ದು, ಜೈಲಿನಲ್ಲಿ ಅಕ್ರಮವಾಗಿ ಬಳಕೆಯಾಗುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನಧಿಕೃತವಾಗಿ ಈ ಮೊಬೈಲ್, ಸಿಮ್​ಗಳನ್ನು ಯಾರು ಬಳಕೆ ಮಾಡುತ್ತಿದ್ದರು ಎನ್ನುವುದನ್ನರಿಯಲು ತನಿಖೆ ನಡೆಸಲಾಗುವುದು ಎಂದು ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ABOUT THE AUTHOR

...view details