ವಿಜಯಪುರ:ಮಹಾನಗರ ಪಾಲಿಕೆ ಹಾಗೂ 12 ನಗರ ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದ ಬೀದಿ ದೀಪಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಬೀದಿ ದೀಪಗಳ ಪ್ರಗತಿ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ.. ನಗರದ ಜಿಲ್ಲಾಧಿಕಾರಿ ಸಭಾಭವನದಲ್ಲಿ ಪಟ್ಟಣ ಪಂಚಾಯತ್ ಹಾಗೂ ಪುರಸಭೆ,ಮಹಾನಗರ ಪಾಲಿಕೆ ವ್ಯಾಪಿಯಲ್ಲಿ ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆಗೆದು ಎಲ್‌ಇಡಿ ದೀಪ ಅಳವಡಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವೈ ಎಸ್ ಪಾಟೀಲ ಸೂಚಿಸಿದರು.
ವಿದ್ಯುತ್ ಉಳಿತಾಯವಾಗುವ ಬಲ್ಬ್‌ಗಳನ್ನು ಅಳವಡಿಸಿ ಅವುಗಳಿಗೆ ಸಿಸಿಎಂಎಸ್ ಕಂಟ್ರೋಲ್ ಅಳವಡಿಸುವಂತೆ ಮುಂದಾಗಬೇಕು. ಅನಗತ್ಯ ಬೀದಿ ದೀಪಗಳು ಉರಿಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದರು.
ಬೀದಿ ದೀಪ ವ್ಯವಸ್ಥೆ ಕುರಿತು ಪಿಡಬ್ಲ್ಯೂಸಿ ಖಾಸಗಿ ಕಂಪನಿ ಜಿಲ್ಲೆಯಲ್ಲಿ ಮಾಡಿದ ಸರ್ವೇ ಕುರಿತು ಪಟ್ಟಣ ಪಂಚಾಯತ್, ಪುರಸಭೆ, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ದೀಪಗಳ ವ್ಯವಸ್ಥೆ ಕುರಿತು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.