ವಿಜಯಪುರ:ಜಿಲ್ಲೆಯಲ್ಲಿ ಕೊರೊನಾ ಭೀತಿ ತಡೆಗಟ್ಟಲು ಲಾಕ್ಡೌನ್ ಮಾಡುವ ಅಭಿಪ್ರಾಯವಿತ್ತು. ಆದರೆ, ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಜ್ಞರು ನೀಡಿದ ಸಲಹೆಯಂತೆ, ಲಾಕ್ಡೌನ್ ಅವಶ್ಯಕತೆ ಇಲ್ಲವೆಂದು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.
ಬೇಕಾಬಿಟ್ಟಿ ಓಡಾಡಿದ್ರೆ ಸಾಂಸ್ಥಿಕ ಕ್ವಾರಂಟೈನ್ಗೆ ಹಾಕುತ್ತೇವೆ: ಜಿಲ್ಲಾಧಿಕಾರಿ
ತಜ್ಞರ ಸಲಹೆ ಪಡೆದು ಜಿಲ್ಲೆಯಲ್ಲಿ ಲಾಕ್ಡೌನ್ ಹೇರುವುದು ಬೇಡವೆಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಹೀಗಾಗಿ ವಿಜಯಪುರದಲ್ಲಿ ಲಾಕ್ಡೌನ್ ಜಾರಿ ಮಾಡಲಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸ್ಪಷ್ಟನೆ ನೀಡಿದರು.
ವಿಜಯಪುರ ನಗರ
ಸಿಎಂ ಸೂಚನೆ ಹಿನ್ನೆಲಯಲ್ಲಿ ಜಿಲ್ಲೆಯಲ್ಲಿ ಲಾಕ್ಡೌನ್ ಹೇರಿಲ್ಲ. ಸಾರ್ವಜನಿಕರು ಇದರ ಲಾಭ ಪಡೆದು ಅನಾವಶ್ಯಕವಾಗಿ ತಿರುಗಾಡಿದರೆ, ಅವರನ್ನು ಇನ್ಸಿಟ್ಯೂಷನಲ್ ಕ್ವಾರಂಟೈನ್ ಮಾಡಲು ಚಿಂತನೆ ನಡೆಸಿದ್ದೇವೆ ಎಂದರು.
ಮುಖ್ಯವಾಗಿ 60 ವರ್ಷದ ಮೇಲ್ಪಟ್ಟವರು ಮನೆ ಬಿಟ್ಟು ಹೊರಗೆ ಬರಬಾರದು. ಬಂದರೆ ಅವರನ್ನು ಮೊದಲಿಗೆ ಎಚ್ಚರಿಸುತ್ತೇವೆ. ಅದಕ್ಕೂ ಬಗ್ಗದಿದ್ದರೆ ಅವರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.