ವಿಜಯಪುರ:ಗಣೇಶ ಹಬ್ಬ ಬಂದ್ರೆ ಸಾಕು ಉತ್ತರ ಕರ್ನಾಟಕ ಭಾಗದಲ್ಲಿ ಸಂಭ್ರಮ ಸರ್ವೇ ಸಾಮಾನ್ಯ. ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿಕೊಂಡು ಜನ್ರು ಸಾಂಪ್ರದಾಯಿಕ ಹಬ್ಬಕ್ಕೆ ಮೆರುಗು ತರ್ತಾರೆ. ಆದ್ರೆ ಈ ವರ್ಷ ಕೊರೊನಾ ಭೀತಿಯ ಬಿಸಿ ಗಣೇಶ ಮೂರ್ತಿ ತಯಾರಿಕರಿಗೂ ತಟ್ಟಿದ್ದು, ಕಚ್ಚಾ ವಸ್ತುಗಳ ಕೊರತೆ ಎದುರಿಸುತ್ತಿದ್ದಾರೆ.
ವಿಜಯಪುರ: ಮೋದಕ ಪ್ರಿಯನಿಗೂ ಕೊರೊನಾ ಕಂಟಕ ಗುಮ್ಮಟನಗರಿ ವಿಜಯಪುರ ನಗರದಲ್ಲಿ ವಿಘ್ನ ವಿನಾಯಕರಿನೂ ಕೊರೊನಾ ಬಿಸಿ ತಟ್ಟಿದಂತಾಗಿದೆ. ಪ್ರತಿ ವರ್ಷವೂ ಸಡಗರದಿಂದ ಆಚರಣೆ ಮಾಡುವ ಹಬ್ಬಕ್ಕೆ ಜಿಲ್ಲಾಡಳಿತ ಈಗಾಗಲೇ ನಿರ್ಬಂಧ ಹೇರಿದೆ. ಇತ್ತ ಮೂರ್ತಿ ತಯಾರಕರು ಕೋವಿಡ್ 19 ಹಾವಳಿಯಿಂದ ಹೊರ ರಾಜ್ಯಗಳಿಂದ ಬರ್ತಿದ್ದ ಕಚ್ಚಾ ವಸ್ತುಗಳು ಸಿಗದೆ ಕಂಗಾಲಾಗಿದ್ದಾರೆ.
ಇನ್ನೊಂದೆಡೆ, ಪರಿಸರ ಪ್ರೇಮಿ ಗಣಪಗಳನ್ನ ತಯಾರಿಕೆ ಮಾಡಿದ್ರೂ, ಸ್ಥಳೀಯವಾಗಿ ಬಣ್ಣ ಹಾಗೂ ಮಣ್ಣಿನ ಕೊರತೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ವಿಗ್ರಹಗಳನ್ನು ಜನ್ರಿಗೆ ನೀಡುವುದು ಕಷ್ಟವಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪೂಜೆಸುವ ದೊಡ್ಡ ಗಾತ್ರದ ಗಣೇಶ ಮೂರ್ತಿಗಳಿಗೆ ಭಾರಿ ಪ್ರಮಾಣದಲ್ಲಿ ಬೇಡಿಕೆ ಇತ್ತು. ಆದ್ರೆ ಜಿಲ್ಲಾಡಳಿತ ನಿಷೇಧ ಹೇರಿಕೆಯಿಂದ ನಷ್ಟ ಎದುರಿಸುವಂತಾಗಿದೆ ಎನ್ನುತ್ತಾರೆ ಗಣೇಶ ಮೂರ್ತಿ ತಯಾರಕರು.
ಪ್ರತಿ ವರ್ಷವೂ ವಿಜಯಪುರ ನಗರದ ನಿವಾಸಿ ಮನೋಹರ ಪತ್ತಾರ ಕಳೆದ 40 ವರ್ಷಗಳಿಂದ ಗಣೇಶ ವಿಗ್ರಹ ತಯಾರಿಕೆ ಮಾಡಿಕೊಂಡು ಬಂದಿದ್ದಾರೆ. ಅಲ್ಲದೆ 400 ಮನೆಯಲ್ಲಿ ಪೂಜೆಸುವ ಮೂರ್ತಿ ತಯಾರಿಸುತ್ತಿದ್ದರು. 10 ರಿಂದ 15 ಸಾರ್ವಜನಿಕ ಸ್ಥಳಗಳಲ್ಲಿ ಪೂಜೆಸುವ ಮೂರ್ತಿ ತಯಾರಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ವಿಘ್ನ ವಿನಾಶಕನ ಮೂರ್ತಿ ತಯಾರಿಕೆಗೆ ಮಣ್ಣು, ಬಣ್ಣ, ನಾರು ಸೇರಿದಂತೆ ಅಗತ್ಯ ಕಚ್ಚಾ ವಸ್ತುಗಳನ್ನು ಮಹಾರಾಷ್ಟ್ರದ ಮುಂಬೈ, ಕೊಲ್ಹಾಪುರದಿಂದ ಖರೀದಿಸುತ್ತಿದ್ದರು. ಆದ್ರೆ ಕೊರೊನಾ ಭೀತಿಯಿಂದ ಸ್ಥಳೀಯವಾಗಿ ಸಿಗುವ ಕಚ್ಚಾ ವಸ್ತುಗಳ ಬಳಕೆ ಮಾಡಿಕೊಂಡು ತಯಾರಿಸಿದ ವಿಗ್ರಹಗಳನ್ನು ಜನ ಖರೀದಿ ಮಾಡುತ್ತಾರೋ, ಇಲ್ಲವೂ ಎಂಬ ಚಿಂತೆ ಎದುರಾಗಿದೆ.
ಒಟ್ಟಿನಲ್ಲಿ ಕೊರೊನಾ ವಿಘ್ನ ನಿರ್ವಾಹಕರಿಗೆ ಕಂಟಕ ತಂದೊಡ್ಡಿದ್ದು, ತಯಾರಿಕೆ ಮಾಡಿದ ವಿಗ್ರಹಗಳು ಮಾರಾಟವಾಗುತ್ತಾ ಅಥವಾ ಇಲ್ಲವಾ ಎಂಬ ಚಿಂತೆ ಸದ್ಯ ಮೂರ್ತಿ ತಯಾರಕರಲ್ಲಿದ್ದು, ಜಿಲ್ಲಾಡಳಿತ ಗಣೇಶ ಉತ್ಸಮಕ್ಕೆ ನಿರ್ಬಂಧ ಹೇರ್ಬಾದು ಎಂಬ ಕೂಗು ಕೇಳಿ ಬರ್ತಿದೆ.