ವಿಜಯಪುರ:ಶಾಸಕರ ಅನುದಾನದಲ್ಲಿ 18 ವಿಕಲಚೇತನರಿಗೆ ತ್ರಿಚಕ್ರ ವಾಹನವನ್ನು ನಾಗಠಾಣಾ ಶಾಸಕ ದೇವಾನಂದ ಚವ್ಹಾಣ್ ವಿತರಿಸಿದರು.
ನಗರದ ಸ್ಟೇಷನ್ ರಸ್ತೆಯಲ್ಲಿರುವ ಶಾಸಕರ ಕಾರ್ಯಾಲಯ ಮುಂಭಾಗದಲ್ಲಿ ವಿಕಲಚೇತನರಿಗೆ 2019-2೦ನೇ ಸಾಲಿನ ವಾಹನ ವಿತರಣೆ ಮಾಡಿದರು. ಶಾಸಕರ ಅನುದಾನದಡಿಯಲ್ಲಿ ತಲಾ ಒಂದು ವಾಹನಕ್ಕೆ 68 ಸಾವಿರ ರೂ. ನೀಡಿ ಖರೀದಿ ಮಾಡಲಾಗಿತ್ತು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಹಯೋಗದಲ್ಲಿ ವಾಹನ ವಿತರಣಾ ಕಾರ್ಯಕ್ರಮ ನಡೆಸಲಾಯಿತು.