ಕರ್ನಾಟಕ

karnataka

ETV Bharat / state

ಮಹಾನಗರ ಪಾಲಿಕೆ ಹೆಸರಿನಲ್ಲಿ ನಕಲಿ ಪಾಸ್ ವಿತರಣೆ: ಆರೋಪಿಯ ಬಂಧನ - ನಕಲಿ ಪಾಸ್ ಮಾರುತ್ತಿದ್ದ ವ್ಯಕ್ತಿಯ ಬಂಧನ

ಲಾಕ್​ಡೌನ್​ ವೇಳೆ ನಗರದಲ್ಲಿ ಓಡಾಡಲು ವಿಜಯಪುರ ಮಹಾನಗರ ಪಾಲಿಕೆ ಹೆಸರಿನ ಮೊಹರು(ಸೀಲ್) ಬಳಸಿ, ನಕಲಿ‌ ಸಹಿ‌ ಮಾಡಿ ವ್ಯಕ್ತಿಯೊಬ್ಬ ಪಾಸ್ ಕೊಡುತ್ತಿದ್ದ ಎನ್ನಲಾಗಿದೆ.

Distribution of duplicate passes in Metropolitan  name
ಸುನೀಲ ಗಾಯಕವಾಡ, ಬಂಧಿತ ಆರೋಪಿ

By

Published : Apr 7, 2020, 8:11 PM IST

ವಿಜಯಪುರ: ಮಹಾನಗರ ಪಾಲಿಕೆ ಹೆಸರಿನಲ್ಲಿ ನಕಲಿ ಪಾಸ್ ಮಾರುತ್ತಿದ್ದ ವ್ಯಕ್ತಿಯೊಬ್ಬನನ್ನು ವಿಜಯಪುರ ಪೊಲೀಸರು ಬಂಧಿಸಿದ್ದಾರೆ.

ಎಸ್​ಪಿ ಅನುಪಮ್ ಅಗರವಾಲ್


ರಾಜಾಜಿನಗರದ ನಿವಾಸಿ ಸುನೀಲ ಗಾಯಕವಾಡ ಬಂಧಿತ ಆರೋಪಿ. ಲಾಕ್​ಡೌನ್​ ವೇಳೆ ನಗರದಲ್ಲಿ ಓಡಾಡಲು ಮಹಾನಗರ ಪಾಲಿಕೆ ಹೆಸರಿನ ಮೊಹರು(ಸೀಲ್) ಬಳಸಿ, ನಕಲಿ‌ ಸಹಿ‌ ಮಾಡಿ ನಕಲಿ ಪಾಸ್ ಕೊಡುತ್ತಿದ್ದ ಎನ್ನಲಾಗಿದೆ.

ಈ ಸಂಬಂಧ ಪಾಲಿಕೆ ಕಂದಾಯ ಅಧಿಕಾರಿ ಮಹೇಶ, ಸುನೀಲ ಗಾಯಕವಾಡ ವಿರುದ್ಧ ಜಲನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ನಕಲಿ ಪಾಸ್​ ಖರೀದಿ ಮಾಡಿರುವವರ ಹುಡುಕಾಟ ನಡೆಸುತ್ತಿದ್ದಾರೆ.

ABOUT THE AUTHOR

...view details