ವಿಜಯಪುರ: ಭೀಮಾ ನದಿ ಪ್ರವಾಹಕ್ಕೆ ಸಿಲುಕಿ ನಲುಗಿದ ಕುಟುಂಬಗಳಿಗೆ ಶಾಸಕ ದೇವಾನಂದ ಚೌಹಾಣ್ ನೆರೆ ಸಂತ್ರಸ್ತರಿಗೆ ದಿನ ಬಳಕೆಯ ಅಗತ್ಯ ಸಾಮಗ್ರಿಗಳ ಕಿಟ್ ವಿತರಣೆ ಮಾಡುತ್ತಿದ್ದಾರೆ.
ವಿಜಯಪುರ: ಪ್ರವಾಹ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಣೆ - Vijayapura Grocery Kit Distribution
ಈಗಾಗಲೇ ಕೆಲವು ಸಂತ್ರಸ್ತರು ಇರುವ ಸೂರು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದು, ನಾಗಠಾಣ ಶಾಸಕ ದೇವಾನಂದ ಚೌಹಾಣ್ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ಒದಗಿಸುವ ಮೂಲಕ ಪ್ರವಾಹ ಸಿಲುಕಿ ನಲುಗಿದ ಕುಟುಂಗಳ ನೆರವಿಗೆ ದಾವಿಸುತ್ತಿದ್ದಾರೆ..
![ವಿಜಯಪುರ: ಪ್ರವಾಹ ಸಂತ್ರಸ್ತರಿಗೆ ದಿನಸಿ ಕಿಟ್ ವಿತರಣೆ Vijayapura](https://etvbharatimages.akamaized.net/etvbharat/prod-images/768-512-9344434-989-9344434-1603887899787.jpg)
ಜಿಲ್ಲೆಯ ಚಡಚಣ ತಾಲೂಕಿನ 12ಕ್ಕೂ ಅಧಿಕ ಗ್ರಾಮಗಳು ಭೀಮಾ ನದಿಯ ನೆರೆಯಿಂದ ಸಂಪೂರ್ಣ ಜಲಾವೃತವಾಗಿ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿವೆ. ಅಲ್ಲದೆ ಜಮೀನುಗಳಿಗೆ ನದಿಯ ನೀರು ನುಗ್ಗಿ ರೈತರ ಬೆಳೆಗಳು ನಾಶಗೊಂಡ ಪರಿಣಾಮ ಇಂದು 400 ಕುಟುಂಬಗಳಿಗೆ ಆಹಾರ ಸಾಮಗ್ರಿ, ಬಟ್ಟೆ ಸೇರಿದಂತೆ ಹಲವು ಸಾಮಗ್ರಿಗಳ ಕಿಟ್ನ್ನು ನಾಗಠಾಣ ಶಾಸಕ ವಿತರಣೆ ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಕೆಲವು ಸಂತ್ರಸ್ತರು ಇರುವ ಸೂರು ಕಳೆದುಕೊಂಡು ಸಂಕಷ್ಟಕ್ಕೊಳಗಾಗಿದ್ದು, ನಾಗಠಾಣ ಶಾಸಕ ದೇವಾನಂದ ಚೌಹಾಣ್ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿಗಳ ಒದಗಿಸುವ ಮೂಲಕ ಪ್ರವಾಹ ಸಿಲುಕಿ ನಲುಗಿದ ಕುಟುಂಗಳ ನೆರವಿಗೆ ದಾವಿಸುತ್ತಿದ್ದಾರೆ.