ಕರ್ನಾಟಕ

karnataka

ETV Bharat / state

ಉಕ್ಕಿ ಹರಿದ ಕೃಷ್ಣಾ ನದಿ: ಪ್ರವಾಹದಿಂದ ಎರಡು ಹಳ್ಳಿಗಳ ಸಂಪರ್ಕ ಕಡಿತ - ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಜಮೀನುಗಳು ಜಲಾವೃತ

ಕೃಷ್ಣಾ ನದಿ ನೀರು ಹೆಚ್ಚಳವಾದ ಹಿನ್ನೆಲೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಗಂಗೂರ-ಕಮಲದಿನ್ನಿ ಗ್ರಾಮದ ಮಧ್ಯೆ ಸಂಪರ್ಕ ಕಡಿತಗೊಂಡಿದೆ.

Disconnection of two villages by flood in muddebihala
ಹಳ್ಳಿಗಳ ಸಂಪರ್ಕ ಕಡಿತ

By

Published : Jul 31, 2021, 9:21 AM IST

ಮುದ್ದೇಬಿಹಾಳ: ಕೃಷ್ಣಾ ನದಿಗೆ ಆಲಮಟ್ಟಿ ಜಲಾಶಯದಿಂದ 4.20 ಲಕ್ಷ ಕ್ಯೂಸೆಕ್ ನೀರು ಹೊರಬಿಟ್ಟಿರುವ ಪರಿಣಾಮ ಪ್ರವಾಹ ಉಂಟಾಗಿದ್ದು, ತಾಲೂಕಿನ ಗಂಗೂರ-ಕಮಲದಿನ್ನಿ ಗ್ರಾಮದ ಮಧ್ಯೆ ಸಂಪರ್ಕ ಕಡಿತಗೊಂಡಿದೆ.

ಕಳೆದ ಒಂದು ವಾರದಿಂದ 2.50 ಲಕ್ಷ ಕ್ಯೂಸೆಕ್​ನಿಂದ 4.20 ಲಕ್ಷ ಕ್ಯೂಸೆಕ್​ಗಳಿಗೆ ನೀರು ಹೆಚ್ಚಳವಾಗಿದೆ. ಇದರಿಂದ ಗಂಗೂರ-ಕಮಲದಿನ್ನಿ ಗ್ರಾಮಕ್ಕೆ ಹೋಗುವ ರಸ್ತೆಯ ಮಧ್ಯದಲ್ಲಿ ಬರುವ ಕಿರು ಹಳ್ಳ ತುಂಬಿ ಹರಿಯುತ್ತಿದ್ದು, ಜನಸಂಚಾರ ಸ್ಥಗಿತವಾಗಿದೆ.

ಪ್ರವಾಹದ ಭಯವಿಲ್ಲದೇ ಬಟ್ಟೆ ತೊಳೆಯುತ್ತಿರುವ ಮಹಿಳೆಯರು:

ಲಕ್ಷ -ಲಕ್ಷ ಕ್ಯೂಸೆಕ್ ನೀರು ಜಲಾಶಯದಿಂದ ಹೊರಬಿಡುತ್ತಿರುವ ಹಿನ್ನೆಲೆ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಜಮೀನುಗಳು ಜಲಾವೃತಗೊಂಡಿದ್ದು ಹಳ್ಳ ಕೊಳ್ಳಗಳು ಭೋರ್ಗರೆದು ತುಂಬಿ ಹರಿಯುತ್ತಿವೆ. ಇದನ್ನು ಲೆಕ್ಕಿಸದೇ ಗಂಗೂರ ಗ್ರಾಮದ ಮಹಿಳೆಯರು ಪ್ರವಾಹದ ನೀರಿನಲ್ಲಿ ಬಟ್ಟೆ ತೊಳೆಯುವುದಕ್ಕೆ ಹೋಗುತ್ತಿದ್ದಾರೆ.

ಶಾಶ್ವತ ಪರಿಹಾರಕ್ಕೆ ಆಗ್ರಹ;

ಪ್ರತಿವರ್ಷ ಮಳೆ ಬಂದು ಪ್ರವಾಹದ ಪರಿಸ್ಥಿತಿ ನಿರ್ಮಾಣವಾದಾಗ ಹಳ್ಳಿಗಳು, ಜಮೀನುಗಳು ಮುಳುಗಡೆ ಆಗುತ್ತಿವೆ. ಮತ್ತೆ ಈ ಭಾಗದ ನದಿ ತೀರದ ಹಳ್ಳಿಗಳನ್ನು ಸ್ಥಳಾಂತರಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕೆಂಬ ಕೂಗು ಕೇಳಿ ಬಂದಿದೆ.

ಇದನ್ನೂ ಓದಿ:ಬಾಗಲಕೋಟೆ ಜಿಲ್ಲೆಯಲ್ಲಿ ಅತಿವೃಷ್ಟಿ: ಪ್ರವಾಹದಿಂದ 50 ಗ್ರಾಮಗಳು ಜಲಾವೃತ

ABOUT THE AUTHOR

...view details