ವಿಜಯಪುರ:ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಸಾವರ್ಕರ್ ವ್ಯಕ್ತಿತ್ವದಲ್ಲಿ ಅಜಗಜಾಂತರ ವ್ಯತ್ಯಾಸವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ಶಿವಕುಮಾರ ಸ್ವಾಮೀಜಿ ಹಾಗೂ ಸಾವರ್ಕರ್ ವ್ಯಕ್ತಿತ್ವದಲ್ಲಿ ತುಂಬಾ ವ್ಯತ್ಯಾಸವಿದೆ: ಸಚಿವ ಸಿ.ಟಿ.ರವಿ - ಪ್ರವಾಸೋದ್ಯಮ ಸಚಿವ ಸಿ ಟಿ ರವಿ
ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಸಾವರ್ಕರ್ ವ್ಯಕ್ತಿತ್ವದಲ್ಲಿ ಅಜಗಜಾಂತರವಿದೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅಭಿಪ್ರಾಯಪಟ್ಟಿದ್ದಾರೆ.
ನಗರಕ್ಕೆ ಭೇಟಿ ನೀಡಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದಗಂಗಾ ಶ್ರೀಗಳು ಸಮಾಜ ಸೇವೆಗೆ ಹೆಸರುವಾಸಿಯಾದವರು. ಆದರೆ ಸಾವರ್ಕರ್ ಅಭಿನವ ಭಾರತ ಸಂಘಟನೆ ಕಟ್ಟಿ ಭಾರತಕ್ಕೆ ಸ್ವಾತಂತ್ರ್ಯ ಕೊಡಿಸುವ ನಿಟ್ಟಿನಲ್ಲಿ ತಮ್ಮ ಇಡೀ ಕುಟುಂಬದವನ್ನು ದೇಶಕ್ಕೆ ಸಮರ್ಪಣೆ ಮಾಡಿದವರು. ಅಂತಹ ಮಾಹಾನ್ ವ್ಯಕ್ತಿಗೆ ಭಾರತ ರತ್ನ ನೀಡುವುದರಿಂದ ಆ ಪ್ರಶಸ್ತಿಯ ಗೌರವ ಹೆಚ್ಚಾಗುತ್ತದೆ. ಹಾಗಾಗಿ ಈ ವಿಚಾರದಲ್ಲಿ ವಿವಾದವಿಲ್ಲ. ಇದನ್ನೇ ವಿವಾದ ಮಾಡುವ ಪ್ರಯತ್ನ ಸರಿಯಲ್ಲ. ಅವರಿಗೆ ಭಾರತ ರತ್ನ ಕೊಡಬೇಕು ಎಂಬುವುದರಲ್ಲಿ ನನ್ನ ಸಹಮತವಿದೆ ಎಂದರು.
ಸಾವರ್ಕರ್ ಅವರಿಗೆ ಭಾರತ ರತ್ನ ಪ್ರಶಸ್ತಿ ಕೊಡಬಾರದು ಎನ್ನುವ ಮನಸ್ಥಿತಿ ಇರುವ ಸಿದ್ದರಾಮಯ್ಯ ಜಲಿಲಾ ಜೈಲಿಗೆ ಹೋಗಿ ನೋಡಲಿ. ಟಿಪ್ಪು ಪರ್ಷಿಯನ್ ಭಾಷೆಯನ್ನು ಭಾರತದ ಮೇಲೆ ಹೇರಿದವರು. ಅಂತವರನ್ನ ವೈಭವೀಕರಿಸಲು ಸಿದ್ದರಾಮಯ್ಯ ಹೊರಟಿದ್ದಾರೆ. ಗಾಂಧೀಜಿಯವರನ್ನು ರಾಷ್ಟ್ರಪಿತ ಎಂದು ಕರೆಯುವುದನ್ನು ತಪ್ಪು ಎಂದು ಸಿದ್ದರಾಮಯ್ಯನವರು ಹೇಳುತ್ತಾರಾ? ಎಂದು ಸಚಿವ ಸಿ.ಟಿ.ರವಿ ಪ್ರಶ್ನಿಸಿದರು. ನಾನು ಹಿಂದೂ, ನನ್ನ ಹೆಸರಲ್ಲಿ ಸಿದ್ದ ರಾಮ ಎರಡು ಇವೆ ಎಂದು ಡೈಲಾಗ್ ಹೊಡಿತಾರೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.