ವಿಜಯಪುರ: ಕ್ರಮೇಣ ಕೊರೊನಾ ಅಲೆ ಕಡಿಮೆಯಾಗುತ್ತೆ ಎಂದು ಜಿಲ್ಲೆಯ ಸುಪ್ರಸಿದ್ಧ ಬಬಲಾದ ಮಠದ ಅಜ್ಜ ಹೇಳಿದ ಕಾಲಜ್ಞಾನ ನಿಜವಾಗಿದೆ. ಹೀಗಾಗಿ, ಕೊರೊನಾ ಕಡಿಮೆಯಾಗುತ್ತಿದ್ದಂತೆ ಬಬಲಾದ ಮಠದ ಸದಾಶಿವ ಅಜ್ಜನವರ ದರ್ಶನಕ್ಕೆ ಭಕ್ತರ ದಂಡು ಹರಿದು ಬರುತ್ತಿದೆ.
ಬಿದರಿ ಹಳ್ಳದಲ್ಲಿ ನಡೆದುಕೊಂಡು ಬರುತ್ತಿರುವ ಭಕ್ತರು ಕಳೆದ ನಾಲ್ಕು ತಿಂಗಳ ಹಿಂದೆ ಬಬಲೇಶ್ವರ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದ ಶಿವರಾತ್ರಿ ಜಾತ್ರೆ ವೇಳೆ ಕೊರೊನಾ ಒಂದನೇ ಅಲೆಯ ಪ್ರಭಾವ ಇನ್ನೂ ಮುಗಿದಿಲ್ಲ. ಮತ್ತೆ ಈ ರೋಗ ಜನರನ್ನು ಇನ್ನಿಲ್ಲದಂತೆ ಕಾಡಲಿದೆ. ಕಾಲ ಕ್ರಮೇಣ ಜನರು ಇದರಿಂದ ಮುಕ್ತಿ ಹೊಂದಲಿದ್ದಾರೆ ಎಂದು ಸದಾಶಿವ ಅಜ್ಜ ಭವಿಷ್ಯ ನುಡಿದಿದ್ದರು.
ಈಗ ಅದು ಸತ್ಯವಾಗಿದೆ ಎಂದು ಭಕ್ತರು ಸದಾಶಿವ ಅಜ್ಜನವರ ದರ್ಶನಕ್ಕೆಂದು ಬಬಲಾದ ಮಠಕ್ಕೆ ದೌಡಾಯಿಸುತ್ತಿದ್ದಾರೆ. ಮಳೆಯಿಂದ ತುಂಬಿ ಹರಿಯುತ್ತಿರುವ ಬಿದರಿ ಹಳ್ಳದಲ್ಲಿ ನಡೆದುಕೊಂಡು ಭಕ್ತರು ದರ್ಶನಕ್ಕಾಗಿ ಮಠದತ್ತ ಆಗಮಿಸುತ್ತಿದ್ದಾರೆ.
ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಮಠಕ್ಕೆ ಬೀಗ ಹಾಕಲಾಗಿದೆ. ಮಠದ ಹೊರಗೆ ಭಕ್ತರು ಮಠಕ್ಕೆ ಬರಬಾರದು ಎಂದು ಫಲಕ ಅಳವಡಿಸಿದ್ದಾರೆ. ಆದರೂ ಭಕ್ತರು ಇದನ್ನು ಲೆಕ್ಕಿಸದೇ ಮಠಕ್ಕೆ ಆಗಮಿಸಿ ಮಠದ ಮುಖ್ಯ ದ್ವಾರಕ್ಕೆ ನಮಸ್ಕರಿಸಿ ಹೋಗುತ್ತಿದ್ದಾರೆ.
ಓದಿ;ಕಳ್ಳತನವಾಗಿದ್ದ ಮಗು ವರ್ಷದ ಬಳಿಕ ಸಿಕ್ಕರೂ ತಾಯಿ ಮಡಿಲು ಸೇರಲು ಕಾನೂನು ತೊಡಕು!