ವಿಜಯಪುರ:ದೇಶದಲ್ಲಿ ಎನ್ಡಿಎ ಹಾಗೂ ಯುಪಿಎ ಹೊರತು ಪಡಿಸಿ ಬೇರೆ ಸರ್ಕಾರ ಅಸ್ವಿತ್ವಕ್ಕೆ ಬರುತ್ತದೆ ಎನ್ನುವ ಮಮತಾ ಬ್ಯಾನರ್ಜಿ ಹೇಳಿಕೆಗೆ ಮಾಜಿ ಪ್ರಧಾನಿ ದೇವೇಗೌಡರು ಸಹಮತ ವ್ಯಕ್ತಪಡಿಸಿದ್ದಾರೆ. ತೃತೀಯ ರಂಗದಲ್ಲಿ ಪ್ರಧಾನಿ ಅಭ್ಯರ್ಥಿಗಳಿದ್ದಾರೆ. ಕೇಂದ್ರದಲ್ಲಿ ಆಡಳಿತ ಬಂದ ಮೇಲೆ ಪ್ರಧಾನಿ ಅಭ್ಯರ್ಥಿಯ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿದರು.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈಯಕ್ತಿಕವಾಗಿ ರಾಹುಲ್ ಗಾಂಧಿ ಪ್ರಧಾನಿಯಾಗಬೇಕೆಂದು ಬಯಸುತ್ತೇನೆ. ಆಲಮಟ್ಟಿ ಅಣೆಕಟ್ಟಿಗೆ ನನ್ನ ಅಧಿಕಾರದಲ್ಲಿ ಚಾಲನೆ ನೀಡಿದ್ದೇನೆ. ಸಾಲ ತೆಗೆದು ಕೃಷ್ಣಾ ಕಣಿವೆಯಲ್ಲಿ ಕೆಲಸಗಳನ್ನು ಮಾಡಿದ್ದೇನೆ. ಆ ವೇಳೆಯಲ್ಲಿ ವರ್ಷಕ್ಕೆ 1 ಸಾವಿರ ಕೋಟಿ ಹಣ ನೀಡಿದ್ದೇನೆ. ಮೋದಿ, ಮನಮೋಹನ ಸಿಂಗ್, ವಾಜಪೇಯಿ ನೀರಾವರಿ ಯೊಜನೆಗಳಿಗೆ ತಲೆ ಕೆಡಿಸಿಕೊಂಡಿಲ್ಲ. ಮೋದಿಯವರು ಏನೆನೋ ಮಾತನಾಡುತ್ತಿದ್ದಾರೆ. ಸುಮ್ಮನೆ ಬೊಂಬಡ ಹೊಡೆಯುತ್ತಿದ್ದಾರೆ ಎಂದು ಹರಿಹಾಯ್ದರು.