ಕರ್ನಾಟಕ

karnataka

ETV Bharat / state

ಗುಳೆ ಹೋದವರಿಗೆ ಗಂಜಿ ಕೇಂದ್ರ ತೆರೆಯಲಿ: ದೇವಾನಂದ ಚವ್ಹಾಣ್ - ಶಾಸಕ ದೇವಾನಂದ ಚವ್ಹಾಣ್

ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋದವರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಅವರಿಗೆ ಅಲ್ಲಿ ಕೆಲಸವೂ ಇಲ್ಲ, ದಿನ ಬಳಕೆ ವಸ್ತುಗಳೂ ಸಿಗುತ್ತಿಲ್ಲ. ಜಿಲ್ಲಾಡಳಿತ ಗಡಿಭಾಗದಲ್ಲಿ ಗಂಜಿ ಕೇಂದ್ರ ತೆರೆದರೆ ಅದರ ಸಂಪೂರ್ಣ ಖರ್ಚು ವೆಚ್ಚ ವೈಯಕ್ತಿಕವಾಗಿ ಭರಿಸುವುದಾಗಿ ಶಾಸಕ ದೇವಾನಂದ ಚವ್ಹಾಣ್ ಹೇಳಿದ್ದಾರೆ.

devananda-chauhan-react-about-corona-problem-in-vijayapura
ಗುಳೆ ಹೋದವರಿಗೆ ಗಂಜಿ ಕೇಂದ್ರ

By

Published : Mar 27, 2020, 3:01 PM IST

ವಿಜಯಪುರ: ಗುಳೆ ಹೋದವರಿಗೆ ಜಿಲ್ಲಾಡಳಿತ ಗಡಿಭಾಗದಲ್ಲಿ ಗಂಜಿ ಕೇಂದ್ರ ತೆರೆದರೆ ಅದರ ಸಂಪೂರ್ಣ ಖರ್ಚು ವೆಚ್ಚ ವೈಯಕ್ತಿಕವಾಗಿ ಭರಿಸುವುದಾಗಿ ಶಾಸಕ ದೇವಾನಂದ ಚವ್ಹಾಣ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ಬೇರೆ ರಾಜ್ಯಗಳಿಗೆ ಗುಳೆ ಹೋದವರು ಅನ್ನಕ್ಕಾಗಿ ಪರದಾಡುತ್ತಿದ್ದಾರೆ.
ಅವರಿಗೆ ಅಲ್ಲಿ ಕೆಲಸವೂ ಇಲ್ಲ, ದಿನ ಬಳಕೆ ವಸ್ತುಗಳೂ ಸಿಗುತ್ತಿಲ್ಲ. ಅವರಿಗೆ ಮರಳಿ ಬರಲು ಕೂಡಾ ಜಿಲ್ಲಾಡಳಿತ ನಿರ್ಬಂಧ ಹೇರಿದೆ ಎಂದರು.

ಈ ಹಿನ್ನಲೆಯಲ್ಲಿ ‌ಗುಳೇ ಹೋದವರು ಕರೆ ಮಾಡಿ ನಮಗೆ ಮರಳಿ ಗ್ರಾಮಕ್ಕೆ ಸೇರಿಸಿಕೊಳ್ಳಿ ಅಂತಿದ್ದಾರೆ.ಜಿಲ್ಲಾಡಳಿತಕ್ಕೆ ನಾನು ಪತ್ರವನ್ನು ಬರೆದಿದ್ದೇನೆ ಎಂದರು.

ಅವರಿಗೆ ಮರಳಿ ಕರೆ ತರವ ವ್ಯವಸ್ಥೆಯಾದರೂ ಮಾಡಬೇಕು, ಇಲ್ಲ ಗಡಿ ಭಾಗದಲ್ಲಿ ಗಂಜಿ ಕೇಂದ್ರ ತೆರೆಯಬೇಕು ಎಂದಿದ್ದು, ಗಡಿ ಭಾಗದಲ್ಲಿ ಪ್ರತ್ಯೇಕವಾಗಿ ಗಂಜಿ ಕೇಂದ್ರ ತೆರೆದು ಅಲ್ಲಿಯೇ ಅವರಿಗೆ ನಿಗಾದಲ್ಲಿ ಇಡಬೇಕು ಎಂದರು.

ABOUT THE AUTHOR

...view details