ಕರ್ನಾಟಕ

karnataka

ETV Bharat / state

ಅಧಿಕಾರಿಗಳೊಂದಿಗೆ ಕೊರೊನಾ ಸ್ಥಿತಿಗತಿ ಕುರಿತು ಚರ್ಚಿಸಿದ ಶಾಸಕ ದೇವಾನಂದ‌ ಚವ್ಹಾಣ್ - ಹೋಮ್ ಕ್ವಾರಂಟೈನ್

ನಾಗಠಾಣ ಕ್ಷೇತ್ರದ ‌ವ್ಯಾಪ್ತಿಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆಯಿಂದ‌ ಜನರಿಗೆ ಮನೆಯಿಂದ ಹೊರ ಬಾರದಂತೆ‌ ನೋಡಿಕೊಳ್ಳಬೇಕು. ಇನ್ನು ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ದೇವಾನಂದ‌ ಚವ್ಹಾಣ್ ಸೂಚಿಸಿದ್ದಾರೆ.

Devananda Chauhan discussing corona virus with officials in vijayapura
ಅಧಿಕಾರಿಗಳೊಂದಿಗೆ ಕೊರೊನಾ ಸ್ಥಿತಿಗತಿ ಕುರಿತು ಚರ್ಚಿಸಿದ ದೇವಾನಂದ‌ ಚವ್ಹಾಣ್

By

Published : Apr 15, 2020, 8:41 PM IST

ವಿಜಯಪುರ:ಕೊರೊನಾ ಸ್ಥಿತಿಗತಿ ಕುರಿತು ನಾಗಠಾಣಾ ಶಾಸಕ ದೇವಾನಂದ‌ ಚವ್ಹಾಣ್ ಅಧಿಕಾರಿಗಳಿಂದ‌ ಮಾಹಿತಿ ಪಡೆದುಕೊಂಡರು.

ನಗರದ ಅಥಣಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿ‌ದ ಶಾಸಕ ದೇವಾನಂದ, ತಮ್ಮ ಕ್ಷೇತ್ರದಲ್ಲಿ ಕೂರೊನಾ ಪಾಸಿಟಿವ್ ಸೋಂಕು ಪತ್ತೆಯಾಗಿಲ್ಲ. ಇನ್ನು ವಿಜಯಪುರ ನಗರದಲ್ಲಿ 9 ಜನರಿಗೆ ಸೋಂಕು ತಗುಲಿ ಪರಿಸ್ಥಿತಿ ಬಿಗಡಾಯಿಸಿದ್ದು, ನಾಗಠಾಣ ಕ್ಷೇತ್ರದ ‌ವ್ಯಾಪ್ತಿಯಲ್ಲಿ ಅಧಿಕಾರಿಗಳು ಮುನ್ನೆಚ್ಚರಿಕೆಯಿಂದ‌ ಜನರಿಗೆ ಮನೆಯಿಂದ ಹೊರ ಬಾರದಂತೆ‌ ನೋಡಿಕೊಳ್ಳಬೇಕು. ಇನ್ನು ರೈತರ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ತಹಶೀಲ್ದಾರರು ‌ನೋಡಿಕೊಳ್ಳಬೇಕು ಎಂದಿದ್ದಾರೆ.

ಅಧಿಕಾರಿಗಳೊಂದಿಗೆ ಕೊರೊನಾ ಸ್ಥಿತಿಗತಿ ಕುರಿತು ಚರ್ಚಿಸಿದ ದೇವಾನಂದ‌ ಚವ್ಹಾಣ್
ಬೇರೆ ಊರುಗಳಿಂದ ಯಾರೇ ಹಳ್ಳಿಗಳಿಗೆ ಆಗಮಿಸಿದರೂ ಅಂತವರ ಮೇಲೆ‌ ಆರೋಗ್ಯಾಧಿಕಾರಿಗಳು ನಿಗಾ ವಹಿಸಬೇಕು. ಅಗತ್ಯ ವಸ್ತುಗಳು ಸಿಗುವಂತೆ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಬೇಕು. ಯಾವುದೇ ವ್ಯಕ್ತಿಗಳಲ್ಲಿ ನೆಗಡಿ, ಕೆಮ್ಮು ಕಾಣಿಸಿಕೊಂಡರೂ ಅವರನ್ನ ವೈದ್ಯಕೀಯ ಪರೀಕ್ಷೆ ನಡೆಸಿ ಹೋಮ್ ಕ್ವಾರಂಟೈನ್ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ABOUT THE AUTHOR

...view details