ವಿಜಯಪುರ: ಸಿಂದಗಿ ತಾಲೂಕಿನ ಬನ್ನಿಹಟ್ಟಿ ಗ್ರಾಮದ ಬಳಿ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ವಾಹನದ ಮೇಲೆ ದೇವರಹಿಪ್ಪರಗಿ ಪೊಲೀಸರು ದಾಳಿ ನಡೆಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ನಸುಕಿನ ಜಾವ ನಡೆದ ದಾಳಿ ವೇಳೆ 5 ಬೊಲೆರೋ ವಾಹನಗಳಲ್ಲಿ ಸಾಗಾಟ ಮಾಡುತ್ತಿದ್ದ ಸುಮಾರು ಮೂರು ಲಕ್ಷ ರೂ. ಮೌಲ್ಯದ ಜಿಲೆಟಿನ್ ಕಡ್ಡಿಗಳು ಹಾಗೂ ಡಿಟೋನೇಟರ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ರಮೇಶ್ ಜಾರಕಿಹೊಳಿ ಯಾರ ಮಾತೂ ಕೇಳುವ ಸ್ಟೇಜ್‌ನಲ್ಲಿಲ್ಲ: ಸಹೋದರ ಸತೀಶ್ ಜಾರಕಿಹೊಳಿ
ಇವು ಮಹಾಂತಗೌಡ ಬಿರಾದಾರ್ ಎಂಬುವವರಿಗೆ ಸೇರಿದ ವಾಹನಗಳಾಗಿವೆ. ದಾಳಿ ವೇಳೆ ನಾಲ್ವರು ಚಾಲಕರು ಬುಲೆರೋ ಬಿಟ್ಟು ಪರಾರಿಯಾಗಿದ್ದು, ಓರ್ವ ಚಾಲಕನನ್ನು ಬಂಧಿಸಲಾಗಿದೆ.
ಪಿಎಸ್ಐ ರವಿ ಯಡವಣ್ಣವರ ನೇತೃತ್ವದಲ್ಲಿ ದಾಳಿ ನಡೆದಿದ್ದು, ಕಲ್ಲು ಗಣಿಗಾರಿಕೆಯವರಿಗೆ ಅಕ್ರಮವಾಗಿ ಸ್ಫೋಟಕ ಮಾರಾಟ ಮಾಡುತ್ತಿದ್ದರೆಂಬ ಮಾಹಿತಿ ಮೇರೆಗೆ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.