ವಿಜಯಪುರ: ಇತ್ತೀಚಿಗೆ ಚೀನಾದ ಕೆರೆಯೊಂದರಲ್ಲಿ ಮನುಷ್ಯನ ಮುಖ ಹೋಲುವ ಮೀನೊಂದು ಕಾಣಿಸಿಕೊಂಡು ಜನರಲ್ಲಿ ಕುತೂಹಲ ಮೂಡಿಸಿದೆ. ಈಗ ಇಂತದ್ದೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದ ಪತ್ರಕರ್ತರೊಬ್ಬರ ಮನೆಯ ಗಿಡದಲ್ಲಿ ಮನುಷ್ಯನ ಮುಖ ಹೋಲುವ ಕೀಟವೊಂದು ಕಾಣಿಸಿಕೊಂಡಿದೆ.
ವಿಜಯಪುರದಲ್ಲಿ ಮನುಷ್ಯನ ಮುಖ ಹೋಲುವ ಅಪರೂಪದ ಕೀಟ ಪತ್ತೆ - Detect rare insect that resembles a man's face at Vijayapur
ಪತ್ರಕರ್ತ ಶಂಕರ್ ಹೆಬ್ಬಾಳ್ ಅವರ ಮನೆಯಲ್ಲಿ ಬೆಳೆಸಿದ ಗಿಡದಲ್ಲಿ ಕೀಟವೊಂದು ಕುಳಿತುಕೊಂಡಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾನವ ಮುಖದ ರೂಪ ಹೋಲುತ್ತಿರುವುದು ಕಂಡು ಬಂದಿದೆ.
![ವಿಜಯಪುರದಲ್ಲಿ ಮನುಷ್ಯನ ಮುಖ ಹೋಲುವ ಅಪರೂಪದ ಕೀಟ ಪತ್ತೆ](https://etvbharatimages.akamaized.net/etvbharat/prod-images/768-512-5027245-thumbnail-3x2-hrs.jpg)
ಮನುಷ್ಯನ ಮುಖ ಹೋಲುವ ಅಪರೂಪದ ಕೀಟ ಪತ್ತೆ
ಪತ್ರಕರ್ತ ಶಂಕರ್ ಹೆಬ್ಬಾಳ್ ಅವರ ಮನೆಯಲ್ಲಿ ಬೆಳೆಸಿರುವ ಗಿಡದಲ್ಲಿ ಈ ಕೀಟ ಕುಳಿತುಕೊಂಡಿತ್ತು. ಅದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಮಾನವ ಮುಖದ ರೂಪ ಹೋಲುತ್ತಿರುವುದು ಕಂಡು ಬಂದಿದೆ.
ಕೀಟದ ಬೆನ್ನಿನ ಮೇಲೆ ಮನುಷ್ಯನ ಎರಡು ಕಣ್ಣು, ಮೂಗು ಸೇರಿದಂತೆ ಮುಖದ ರೂಪ ಕಾಣುತ್ತಿದೆ. ಈ ಅಪರೂಪದ ಕೀಟ ನೋಡಲು ಸಾರ್ವಜನಿಕರು ಆಗಮಿಸುತ್ತಿದ್ದಾರೆ.