ಕರ್ನಾಟಕ

karnataka

ETV Bharat / state

ನಿರ್ಭಯಾ ಅಪರಾಧಿಗಳಿಗೆ ಗಲ್ಲು: ದೇಶ ರಕ್ಷಣಾ ಪಡೆಯಿಂದ ವಿಜಯೋತ್ಸವ - ನಿರ್ಭಯ ಅಪರಾಧಿ

ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ್ದಕ್ಕೆ ವಿಜಯಪುರದ ದೇಶ ರಕ್ಷಣಾ ಪಡೆಯ ಕಾರ್ಯಕರ್ತೆಯರು ಸಂಭ್ರಮಾಚರಣೆ ಮಾಡಿದರು.

Vijayapura
ದೇಶ ರಕ್ಷಣಾ ಪಡೆಯಿಂದ ವಿಜಯೋತ್ಸವ

By

Published : Mar 20, 2020, 6:34 PM IST

ವಿಜಯಪುರ:ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಿದ್ದಕ್ಕೆ ದೇಶ ರಕ್ಷಣಾ ಪಡೆಯ ಕಾರ್ಯಕರ್ತೆಯರು ಸಂಭ್ರಮಾಚರಣೆ ಮಾಡಿದರು.

ದೇಶ ರಕ್ಷಣಾ ಪಡೆಯಿಂದ ವಿಜಯೋತ್ಸವ

ನಗರದ ಮಾಜರೇಕರ್ ಚಾಳದಲ್ಲಿ ದೇಶ ರಕ್ಷಣಾ ಪಡೆ ಮಹಿಳಾ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ ದೇಶದ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ಅತ್ಯಾಚಾರಿಗಳನ್ನು ಗಲ್ಲಿಗೆ ಹಾಕುವ ಕಾನೂನು ಸರ್ಕಾರ ಜಾರಿ ಮಾಡಬೇಕು. ಆಗ ದೇಶದಲ್ಲಿ ಮಹಿಳೆಯರು ಸುರಕ್ಷಿತವಾಗಿರುತ್ತಾರೆ.‌ ಅತ್ಯಾಚಾರ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯವಾಗಲಿದೆ ಎಂದು ದೇಶ ರಕ್ಷಣಾ ಪಡೆ ಮಹಿಳೆಯರು‌ ಸರ್ಕಾರಕ್ಕೆ ಒತ್ತಾಯಿಸಿದರು.

ಇನ್ನು ದೇಶದಲ್ಲಿ ಅನೇಕ ಅತ್ಯಾಚಾರ ಪ್ರಕರಣಗಳು ನಡೆದಿವೆ. ಅವುಗಳ ತನಿಖೆ ನಡೆಸಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

ABOUT THE AUTHOR

...view details