ಕರ್ನಾಟಕ

karnataka

ETV Bharat / state

ಕುಡುಕರ ಕಾಟಕ್ಕೆ ಕಳ್ಳತನ ಭೀತಿ ಎದುರಿಸುತ್ತಿದೆ ವಿಜಯಪುರ ಅಬಕಾರಿ ಇಲಾಖೆ! - Excise Facing Fear of Burglary

ಲಾಕ್​​​ಡೌನ್​​ ಹಿನ್ನೆಲೆ ಅಕ್ರಮ ಮದ್ಯವನ್ನು ವಶಪಡಿಸಿಕೊಂಡಿರುವ ಅಬಕಾರಿ ಇಲಾಖೆಗೆ ಕಳ್ಳರ ಭೀತಿ ಎದುರಾಗಿದೆ. ವಿಜಯಪುರ ಅಬಕಾರಿ ಇಲಾಖೆ ಕಚೇರಿ ಶಿಕಾರಿಖಾನೆ ಹೊರವಲಯದಲ್ಲಿರುವ ಕಾರಣ ಕಳ್ಳರು ಬೀಗ ಮುರಿದು ಮದ್ಯ ಕಳ್ಳತನ ಮಾಡುತ್ತಾರೆಂಬ ಭೀತಿ ಮೂಡಿದೆ.

ಅಬಕಾರಿ ಇಲಾಖೆ
ಅಬಕಾರಿ ಇಲಾಖೆ

By

Published : Apr 17, 2020, 5:21 PM IST

ವಿಜಯಪುರ:ಮದ್ಯ ಸಿಗದೇ ಕುಡುಕರು ಮದ್ಯದಂಗಡಿಗಳ ಬೀಗ ಮುರಿಯುತ್ತಿದ್ದಾರೆ. ಇದರಿಂದ ಹೆಚ್ಚು ಭೀತಿಗೊಳಗಾಗಿರುವ ಜಿಲ್ಲೆಯ ಅಬಕಾರಿ ಇಲಾಖೆ, ಲಾಕ್​​ಡೌನ್ ನಂತರ ಜಪ್ತಿ ಮಾಡಿರುವ ಲಕ್ಷಾಂತರ ರೂ. ಮೌಲ್ಯದ ಮದ್ಯವನ್ನು ಕಳ್ಳರಿಂದ ರಕ್ಷಿಸುವ ಸವಾಲು ಎದುರಿಸುತ್ತಿದೆ.

ವಿಜಯಪುರ ಅಬಕಾರಿ ಇಲಾಖೆ ಕಚೇರಿ ಶಿಕಾರಿಖಾನೆ ಹೊರವಲಯದಲ್ಲಿರುವ ಕಾರಣ ಕಳ್ಳರು ಬೀಗ ಮುರಿದು ಮದ್ಯ ಕಳ್ಳತನ ಮಾಡುತ್ತಾರೆಂಬ ಭೀತಿ ಇದೆ. ಜಿಲ್ಲೆಯಲ್ಲಿ ಲಾಕ್​ಡೌನ್ ಆದ ನಂತರ ಮದ್ಯ ಮಾರಾಟ ಸ್ಥಗಿತಗೊಂಡಿದೆ. ಇದರಿಂದ ಕಳ್ಳಭಟ್ಟಿ ಸರಾಯಿ ಮಾರಾಟ ಹೆಚ್ಚಾಗಿದೆ. ಇಲ್ಲಿಯವರೆಗೆ ಅಬಕಾರಿ ಇಲಾಖೆ 457 ಕಡೆ ದಾಳಿ ಮಾಡಿದೆ. 338 ಲೀಟರ್ ಸಾರಾಯಿ, 334 ಲೀಟರ್ ಬಿಯರ್, 21 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಸಂಬಂಧ 43 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಎರಡು ಮದ್ಯದಂಗಡಿ ಲೈಸನ್ಸ್ ರದ್ದು ಮಾಡಲು ಶಿಫಾರಸು ಮಾಡಲಾಗಿದೆ.

ಈಟಿವಿ ಭಾರತ್​​ನೊಂದಿಗೆ ಮಾತನಾಡಿದ ಅಬಕಾರಿ ಇಲಾಖೆ ಅಧಿಕಾರಿ ಎ.ರವಿಶಂಕರ್

ಲಾಕ್​ಡೌನ್ ಆಗಿ ಸುಮಾರು 25 ದಿನಗಳು ಕಳೆದಿವೆ. ಇಷ್ಟು ದೀರ್ಘ ಕಾಲ ಮದ್ಯ ಮಾರಾಟ ನಿಷೇಧ ಮಾಡಿರುವುದು ತುಂಬಾ ಕಡಿಮೆ. ಲಾಕ್​ಡೌನ್ ಹೀಗೆಯೇ ಮುಂದುವರೆದರೆ ಅಬಕಾರಿ ಇಲಾಖೆ ಕಚೇರಿಯಲ್ಲೂ ಕಳ್ಳತನವಾಗುವ ಭಯದ ವಾತಾವರಣ ನಿರ್ಮಾಣವಾಗಿದೆ.

ABOUT THE AUTHOR

...view details