ವಿಜಯಪುರ:ಕೊರೊನಾ ಭೀತಿ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದರ ನಡುವೆ ಜನರಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಳ್ಳುತ್ತಿದ್ದು, ಆತಂಕ ಹೆಚ್ಚಾಗಿದೆ.
ಕೊರೊನಾ ವೈರಸ್ ಸಾರ್ವಜನಿಕ ಜೀವನವನ್ನು ಬುಡಮೇಲು ಮಾಡಿದೆ. ಮಾಹಾಮಾರಿಯಿಂದಾಗಿ ಅದೆಷ್ಟೋ ಜನರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೊನಾಗೆ ಚಿಕಿತ್ಸೆ ನೀಡಲು ಬಹುತೇಕ ಜಿಲ್ಲಾಸ್ಪತ್ರಗಳು ಕೋವಿಡ್19 ಚಿಕಿತ್ಸಾ ಆಸ್ಪತ್ರೆಗಳಾಗಿ ಪರಿವರ್ತನೆಗೊಂಡಿದ್ದು, ಇತರೆ ಕಾಯಿಲೆಗಳಿಗೆ ಸರಿಯಾಗಿ ಚಿಕಿತ್ಸೆ ಸಿಗದೆ ಗುಮ್ಮಟ ನಗರಿಯಲ್ಲಿ ಹಲವು ರೋಗಿಗಳು ಪರದಾಟ ನಡೆಸುತ್ತಿದ್ದು, ಈ ನಡುವೆ ಜಿಲ್ಲೆಯಲ್ಲಿ ಡೆಂಗ್ಯೂ ಜ್ಬರದ ಹಾವಳಿ ಶುರುವಾಗಿದೆ.
ಡೆಂಗ್ಯೂ ಜ್ವರದ ಕುರಿತಾದ ಮಾಹಿತಿ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಅಧಿಕಾಗಳು ಕೊರೊನಾ ತಡೆಗಟ್ಟುವಲ್ಲಿ ನಿತರರಾಗಿದ್ದು, ಇತ್ತ ಡೆಂಗ್ಯೂ ಜ್ವರದ ಹಾವಳಿ ತಲೆನೋವಾಗಿ ಪರಿಣಮಿಸಿದೆ. 2019ರ ಜನವರಿಯಿಂದ ಡಿಸೆಂಬರ್ವರೆಗೆ ಒಟ್ಟು 1328 ಡೆಂಗ್ಯೂ ಜ್ವರ ಶಂಕಿತರ ರಕ್ತದ ಮಾದರಿಗಳನ್ನ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿತ್ತು. ಅದರಲ್ಲಿ 545 ಜನರಿಗೆ ಡೆಂಗ್ಯೂ ಕಾಣಿಕೊಂಡಿತ್ತು. ಇನ್ನೂ ಈ ವರ್ಷ ಜನವರಿಯಿಂದ ಏಪ್ರಿಲ್‌ವರೆಗೆ 300 ಜನರನ್ನು ಪರೀಕ್ಷೆ ಒಳಪಡಿಸಿದಾಗ 95 ಜನರಿಗೆ ಡೆಂಗ್ಯೂ ಧೃಡವಾಗಿದೆ.
ಮಳೆಗಾಲ ಆರಂಭಕ್ಕೂ ಮುನ್ನವೇ ಡೆಂಗ್ಯೂ ಜ್ವರ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.