ಕರ್ನಾಟಕ

karnataka

ETV Bharat / state

ಅಂಬೇಡ್ಕರ್ ರಾಜಗೃಹ ನಿವಾಸ ಧ್ವಂಸ ಖಂಡಿಸಿ ಡಿಎಸ್‌ಎಸ್​ನಿಂದ ಪ್ರತಿಭಟನೆ - ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ

ರಾಜಗೃಹ ನಿವಾಸ ಮೇಲೆ ಧ್ವಂಸ ಕೃತ್ಯದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ನಿವಾಸದಲ್ಲಿ ಸಿಸಿ ಕ್ಯಾಮೆರಾ ಒಡೆದು ಹಾಕಿ ದ್ವಂಸ ಮಾಡಿಲಾಗಿದೆ. ಇದು ಸಂವಿಧಾನ ರಚನಾಕಾರರಿಗೆ ಮಾಡಿದ ಅವಮಾನ‌..

DSS Protest
ಅಂಬೇಡ್ಕರ್ ರಾಜಗೃಹ ನಿವಾಸ ಧ್ವಂಸ ಖಂಡಿಸಿ ಡಿಎಸ್‌ಎಸ್​ನಿಂದ ಪ್ರತಿಭಟನೆ

By

Published : Jul 13, 2020, 2:49 PM IST

ವಿಜಯಪುರ: ಮುಂಬೈನಲ್ಲಿರುವ ಅಂಬೇಡ್ಕರ್ ರಾಜಗೃಹ ನಿವಾಸ ಧ್ವಂಸ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಡಿಎಸ್‌ಎಸ್) ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಅಂಬೇಡ್ಕರ್ ರಾಜಗೃಹ ನಿವಾಸ ಧ್ವಂಸ ಖಂಡಿಸಿ ಡಿಎಸ್‌ಎಸ್​ನಿಂದ ಪ್ರತಿಭಟನೆ
ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಡಿಎಸ್‌ಎಸ್ ಕಾರ್ಯಕರ್ತರು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ರಾಜಗೃಹ ನಿವಾಸ ಮೇಲೆ ಧ್ವಂಸ ಕೃತ್ಯದಲ್ಲಿ ಕಾಣದ ಕೈಗಳು ಕೆಲಸ ಮಾಡಿವೆ. ನಿವಾಸದಲ್ಲಿ ಸಿಸಿ ಕ್ಯಾಮೆರಾ ಒಡೆದು ಹಾಕಿ ದ್ವಂಸ ಮಾಡಿಲಾಗಿದೆ. ಇದು ಸಂವಿಧಾನ ರಚನಾಕಾರರಿಗೆ ಮಾಡಿದ ಅವಮಾನ‌. ಈ ಕೃತ್ಯದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ದೂರಿದರು. ಅಂಬೇಡ್ಕರ್ ವಿರುದ್ಧ ಕೋಮುವಾದಿಗಳು ಸಂಚು ಹೂಡಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ಸೂಕ್ತ ತನಿಖೆ ಕೈಗೊಳ್ಳುವಂತೆ ಒತ್ತಾಯಸಿದರು.

ಕೃತ್ಯದಲ್ಲಿ ಭಾಗಿಯಾದವರನ್ನ ಎರಡು ದಿನಗಳ ಒಳಗೆ ಮಹಾರಾಷ್ಟ್ರ ಸರ್ಕಾರ ಪತ್ತೆ ಹಚ್ಚಲು ಮುಂದಾಗಬೇಕು. ಕಾಣದ ಕೈಗಳಿಗೆ ತಕ್ಕ ಪಾಠ ಕಲಿಸುವಂತೆ ಒತ್ತಾಯಿಸಿ ಡಿಎಸ್‌ಎಸ್ ಕಾರ್ಯಕರ್ತರು ಜಿಲ್ಲಾಧಿಕಾರಿ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details