ವಿಜಯಪುರ: ಆರ್ಟಿಇ ಪುನಾರಂಭ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲೆಯಾದ್ಯಂತ ಖಾಸಗಿ ಶಾಲೆಗಳನ್ನ ಬಂದ್ ಮಾಡಿ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದಿಂದ ಇಂದು ಪ್ರತಿಭಟನೆ ನಡೆಸಲಾಯಿತು.
ಆರ್ಟಿಇ ಪುನಾರಂಭಕ್ಕೆ ಆಗ್ರಹ: ವಿಜಯಪುರದಲ್ಲಿ ಖಾಸಗಿ ಶಾಲಾ ಆಡಳಿತ ಮಂಡಳಿಯಿಂದ ಪ್ರತಿಭಟನೆ - Vijayapur Protest news
ಆರ್ಟಿಇ ಪುನಾರಂಭ ಸೇರಿದಂತೆ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಿಜಯಪುರ ಜಿಲ್ಲೆಯಾದ್ಯಂತ ಖಾಸಗಿ ಶಾಲೆಗಳನ್ನ ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು.

ನಗರದ ಸಿದ್ದೇಶ್ವರ ಮಂದಿರ ಮಾರ್ಗವಾಗಿ ಬೃಹತ್ ಪಾದಯಾತ್ರೆ ಕೈಗೊಂಡ ಖಾಸಗಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಗಾಂಧಿ ವೃತ್ತ ಮಾರ್ಗವಾಗಿ ಪಾದಯಾತ್ರೆ ಕೈಗೊಂಡ ಸರ್ಕಾರ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು. ಜಿಲ್ಲೆಯ ಖಾಸಗಿ ಶಾಲೆಗಳನ್ನು ಬಂದ್ ಮಾಡಿ 3 ಸಾವಿರಕ್ಕೂ ಅಧಿಕ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಆರ್ಟಿಇ ಖಾಸಗಿ ಶಾಲೆಗಳಿಗೆ ಮೊದಲಿನಂತೆ ಮರುಚಾಲನೆ ನೀಡಬೇಕು. ಖಾಸಗಿ ಶಾಲೆಗಳ ನವೀಕರಣ ಪದ್ಧತಿ ಸರಳಗೊಳಿಸಿ ಖಾಸಗಿ ಶಾಲೆಗಳ ಶಿಕ್ಷಕರಿಗೆ ಸೇವಾ ಭದ್ರೆತೆ ಒದಗಿಸಬೇಕು. 1995 ರಲ್ಲಿ ಪ್ರಾರಂಭವಾದ ಶಾಲೆಗಳನ್ನು ಅನುದಾನಕ್ಕೊಳಪಡಿಸಬೇಕು. ಸರ್ಕಾರಿ ಶಾಲೆಗಳಿಗೆ ಸಿಗುವ ಸೌಲಭ್ಯಗಳು ಖಾಸಗಿ ಶಾಲೆಗಳಿಗೂ ಸಿಗಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೆಚ್. ಪ್ರಸನ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.