ಕರ್ನಾಟಕ

karnataka

ETV Bharat / state

ವಿಜಯಪುರ: ಸೀಲ್​ ಡೌನ್​ ಪ್ರದೇಶದಲ್ಲಿ ದಿನಸಿ ಕಿಟ್​​ ವಿತರಣೆ - 1500 ರೂ ಬೆಲೆಯ ಆಹಾರ ಕಿಟ್

ವಿಜಯಪುರದಲ್ಲಿ ಕಳೆದ ಎರಡು ದಿನಗಳಿಂದ ಮಹಾನಗರ ಪಾಲಿಕೆ ಸಿಬ್ಬಂದಿ ಸೀಲ್ ​ಡೌನ್​​ ಆಗಿರುವ ಪ್ರದೇಶಗಳ ಮನೆ ಮನೆಗೆ ತೆರಳಿ ಆಹಾರ ಸಾಮಗ್ರಿಗಳ ಕಿಟ್ ಒದಗಿಸುತ್ತಿದ್ದಾರೆ.

Delivery of foodstuffs to the seal down area .
ಸೀಲ್​ಡೌನ್​ ಪ್ರದೇಶಕ್ಕೆ ಆಹಾರ ಸಾಮಗ್ರಿ ವಿತರಣೆ

By

Published : May 1, 2020, 3:55 PM IST

ವಿಜಯಪುರ: ಕೊರೊನಾ ಪಾಸಿಟಿವ್ ಕಂಡು ಬಂದ ಪ್ರದೇಶದಲ್ಲಿ ಜಿಲ್ಲಾಡಳಿತದಿಂದ ದವಸ ಧಾನ್ಯಗಳ ಕಿಟ್​ಗಳನ್ನು ವಿತರಿಸಲಾಗುತ್ತಿದೆ.

ಕಳೆದ ಎರಡು ದಿನಗಳಿದ ಸೀಲ್ ​ಡೌನ್​​ ಆಗಿರುವ ಪ್ರದೇಶದ ಮನೆ ಮನೆಗೆ ತೆರಳಿ ಮಹಾನಗರ ಪಾಲಿಕೆ ಸಿಬ್ಬಂದಿ ಆಹಾರ ಸಾಮಗ್ರಿಗಳ ಕಿಟ್ ನೀಡುತ್ತಿದ್ದಾರೆ. ನಗರದ ಬಡೆಕಮಾನ್ ಕಾಲೋನಿ, ಹಕ್ಕಂ ಚೌಕ್, ಹರಣಶಿಕಾರಿ ಕಾಲೋನಿ, ವಡ್ಡರ ಗಲ್ಲಿ ಸೇರಿದಂತೆ ಹೆಚ್ಚಿನ ಜನರಿಗೆ ಕೊರೊನಾ ಸೋಂಕು ಕಂಡ ಬಂದ ಬಡಾವಣೆಗಳನ್ನು ಜಿಲ್ಲಾಡಳಿತ ಸೀಲ್ ​ಡೌನ್​​ ಮಾಡಿ ರೆಡ್ ಝೋನ್ ಎಂದು ಘೋಷಣೆ ಮಾಡಿದೆ. ಹೀಗಾಗಿ ಈ ಪ್ರದೇಶದಲ್ಲಿ ಸುಮಾರು 7 ಸಾವಿರ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ ಮಾಡಲಾಗುತ್ತಿದೆ.

ಸೀಲ್​ ಡೌನ್​ ಪ್ರದೇಶದಲ್ಲಿ ಆಹಾರ ಸಾಮಗ್ರಿ ವಿತರಣೆ

1500 ರೂ. ಬೆಲೆಯ ದಿನಸಿ ಕಿಟ್‌ನಲ್ಲಿ ಟೀ ಪುಡಿ, ಸಕ್ಕರೆ, ಅಕ್ಕಿ, ಸಾಬೂನು, ಹಿಟ್ಟು, ಮಸಾಲೆ ಸಾಮಾಗ್ರಿ ಸೇರಿದಂತೆ ಅವಶ್ಯಕ ಆಹಾರ ಸಾಮಗ್ರಿಗಳನ್ನ ಪಾಲಿಕೆ ಸಿಬ್ಬಂದಿ ಮನೆ ಮನೆಗೆ ತೆರಳಿ ಟ್ರ್ಯಾಕ್ಟರ್ ಮೂಲಕ ಹಂಚಿಕೆ ಮಾಡುತ್ತಿದ್ದಾರೆ.

ABOUT THE AUTHOR

...view details