ವಿಜಯಪುರ: ಮಹಾರಾಷ್ಟ್ರದಲ್ಲಿ ಮಳೆ ಅಬ್ಬರ ಕಡಿಮೆಯಾಗಿದ್ದು, ಭೀಮಾ ತೀರದಲ್ಲಿ ಉಂಟಾಗಿದ್ದ ಪ್ರವಾಹ ಸ್ವಲ್ಪ ಮಟ್ಟಿಗೆ ಇಳಿಮುಖ ಕಂಡು ಬಂದಿದೆ.
ಕೊಂಚ ಶಾಂತವಾದ ಭೀಮೆ: ಉತ್ತರ ಕರ್ನಾಟಕ ಮಂದಿ ನಿರಾಳ - Bhima River
ನೆರೆಯ ಮಹಾರಾಷ್ಟ್ರದಲ್ಲಿ ಮಳೆಯ ಅಬ್ಬರ ಕಡಿಮೆಯಾಗಿದ್ದು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಪರಿಸ್ಥಿತಿ ಕಡಿಮೆಯಾಗಿದೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹ ಇಳಿಕೆ
ಉತ್ತರ ಕರ್ನಾಟಕದಲ್ಲಿ ಪ್ರವಾಹ ಇಳಿಕೆ
ಸಿಂದಗಿ ತಾಲೂಕಿನ ದೇವಣಗಾಂವ ಗ್ರಾಮದ ಸೇತುವೆಯ ಮಾಪನ ಪಟ್ಟಿಯಲ್ಲಿ ಒಂದು ಮೀಟರ್ ನೀರು ಕಡಿಮೆಯಾಗಿದೆ. ನಿನ್ನೆ ಸಂಜೆ 15 ಮೀ. ಹರಿಯುತ್ತಿದ್ದ ನೀರು ಸದ್ಯ 14 ಮೀ.ಗೆ ಇಳಿಕೆಯಾಗಿದೆ. ದೇವಣಗಾಂವ ಬಸವೇಶ್ವರ ವೃತ್ತದಲ್ಲಿ ನೀರು ತುಂಬಿಕೊಂಡಿದೆ.
ಇದು ಪ್ರವಾಹ ಪೀಡಿತ ಗ್ರಾಮಗಳ ಜನರಲ್ಲಿ ಸ್ವಲ್ಪ ಮಟ್ಟಿನ ಸಮಾಧಾನ ತಂದಿದೆ. ಸಂಜೆಯವರೆಗೆ ನೀರಿನ ಪ್ರಮಾಣ ಮತ್ತಷ್ಟು ಇಳಿಮುಖವಾದರೆ ಮತ್ತೆ ಪರಿಹಾರ ಕೇಂದ್ರದಿಂದ ವಾಪಸ್ ತಮ್ಮ ಮನೆಗಳಿಗೆ ಹೋಗಬಹುದು ಎಂಬುದು ಗ್ರಾಮಸ್ಥರ ಲೆಕ್ಕಾಚಾರವಾಗಿದೆ.