ವಿಜಯಪುರ:ಯುವತಿಯೊಬ್ಬಳು ಈಜಲು ಹೋಗಿ ಈಜು ಬಾರದೇ ಅಸುನೀಗಿರುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಸಮೀಪದ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ನಡೆದಿದೆ.
ಕಾಲುವೆಯಲ್ಲಿ ಈಜಲು ಹೋಗಿ ಯುವತಿ ಸಾವು
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಗ್ರಾಮದ ಸಮೀಪದ ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯಲ್ಲಿ ಯುವತಿಯೊಬ್ಬಳು ಈಜಲು ಹೋಗಿ ಈಜು ಬಾರದೇ ಸಾವನ್ನಪ್ಪಿದ್ದಾಳೆ.
ಈಜಲು ಹೋಗಿ ಯುವತಿ ಸಾವು
ಗೆದ್ದಲಮರಿ ತಾಂಡಾ ನಿವಾಸಿ ಕಲ್ಪನಾ ನಾಯಕ (17) ನೀರುಪಾಲಾಗಿದ್ದು, ಎಡದಂಡೆ ಕಾಲುವೆಯಲ್ಲಿ ಇಳಿದು ದಂಡೆಯಲ್ಲಿ ನೀರು ಮೈಮೇಲೆ ಹಾಕಿಕೊಳ್ಳುತ್ತಾ ಈಜಲು ಪ್ರಯತ್ನಿಸಿದಾಗ ಅಲ್ಲಿ ಮುಳುಗಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.