ಕರ್ನಾಟಕ

karnataka

ETV Bharat / state

ವಿಜಯಪುರ: ಅನಾರೋಗ್ಯದಿಂದ ಯೋಧ‌ ನಿಧನ - ಪ್ರಸ್ತುತ ಗ್ವಾಲಿಯರ್‌ದಲ್ಲಿ ಸೇವೆ

Soldier Death: ವಿಜಯಪುರ ಜಿಲ್ಲೆಯ ಖೇಡಗಿ ಗ್ರಾಮದ ಯೋಧ ಅನಾರೋಗ್ಯದಿಂದ ಲಖನೌದ ಕಮಾಂಡೋ ಮಿಲಿಟರಿ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

Death of a sick soldier
ಅನಾರೋಗ್ಯದಿಂದ ಬಳಲುತ್ತಿದ್ದ ಯೋಧ‌ ಸಾವು

By ETV Bharat Karnataka Team

Published : Sep 5, 2023, 12:50 PM IST

ವಿಜಯಪುರ:ಜಿಲ್ಲೆಯ ಇಂಡಿ ತಾಲೂಕಿನ ಖೇಡಗಿ ಗ್ರಾಮದ ಯೋಧ ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಲಖನೌದ ಕಮಾಂಡೋ ಮಿಲಿಟರಿ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ. ಪ್ರಕಾಶ ಶಿರಶ್ಯಾಡ ಮೃತ ಯೋಧ ಎಂದು ತಿಳಿದು ಬಂದಿದೆ.

ಯೋಧ ಪ್ರಕಾಶ 2011ರಲ್ಲಿ ಸೈನ್ಯದಲ್ಲಿ ಭರ್ತಿಯಾಗಿ ಮದ್ರಾಸ್ ರೆಜಿಮೆಂಟ್ 7 ವೆಲಿಂಗ್ಟನ್​ದಲ್ಲಿ ತರಬೇತಿ ಪಡೆದು ನಂತರ ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶ ಇನ್ನಿತರ ಕಡೆ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಮಧ್ಯಪ್ರದೇಶದ ಗ್ವಾಲಿಯರ್‌ದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಲೆಬನಾನ್​ದಲ್ಲಿ ನಡೆದಿದ್ದ ಇಂಡೋ- ಲೆಬನಾನ್ ಜಂಟಿ ಸಮರಾಭ್ಯಾಸ ತರಬೇತಿಯಲ್ಲಿ ಭಾಗಿಯಾಗಿದ್ದರು.

ಅವರಿಗೆ ತಂದೆ ನೀಲಪ್ಪ, ತಾಯಿ ರುಕಮಾಬಾಯಿ, ಪತ್ನಿ ಕವಿತಾ, ಮಕ್ಕಳಾದ ಪ್ರತೀಕ್ಷಾ, ಪ್ರಗತಿ, ಸಹೋದರ ಸಂತೋಷ ಇದ್ದಾರೆ. ಮೃತರ ಅಂತ್ಯಕ್ರಿಯೆ ಮಂಗಳವಾರ ಸಕಲ ಗೌರವದೊಂದಿಗೆ ಸ್ವಗ್ರಾಮ ಖೇಡಗಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಕೊಡಗು: ಕಾರ್ಯಾಚರಣೆ ವೇಳೆ ಕಾಡಾನೆ ದಾಳಿ.. ಅರಣ್ಯ ಇಲಾಖೆಯ ಸಿಬ್ಬಂದಿ ಸಾವು

ABOUT THE AUTHOR

...view details