ವಿಜಯಪುರ:ಭೀಮಾ ನದಿಯಲ್ಲಿ ಕಳೆದ ಮೂರು ದಿನಗಳ ಹಿಂದೆ ಕೊಚ್ಚಿ ಹೋಗಿದ್ದ ಯುವಕನ ಶವ ಇಂದು ಚಡಚಣ ತಾಲೂಕಿನ ಧೂಳಖೇಡ ಸೇತುವೆ ಬಳಿ ಪತ್ತೆಯಾಗಿದೆ.
ಹತ್ತಳ್ಳಿ ಗ್ರಾಮದ ಯುವಕ ರಮೇಶ ಬಸರಗಿ (25) ಕಳೆದ ಬುಧವಾರ ಸಂಬಂಧಿಕರ ಅಂತ್ಯಕ್ರಿಯೆ ಮುಗಿಸಿಕೊಂಡು ಸ್ವಗ್ರಾಮಕ್ಕೆ ಮರಳುತ್ತಿದ್ದ. ಈ ವೇಳೆ ಮಾರ್ಗಮಧ್ಯೆ ಬಾಂದಾರ ಕಂ ಸೇತುವೆ ಬಳಿ ನದಿ ನೀರಿನ ರಭಸ ಹೆಚ್ಚಾಗಿದ್ದರಿಂದ ಬೈಕ್ ಸಮೇತ ರಮೇಶ ಕೊಚ್ಚಿ ಹೋಗಿದ್ದನು. ಕಳೆದ ಮೂರು ದಿನಗಳಿಂದ ಯುವಕನ ಹುಡುಕಾಟ ನಡೆದಿತ್ತು. ಇಂದು ಸಂಜೆ 4ಗಂಟೆಗೆ ಧೂಳಖೇಡ ಸೇತುವೆ ಬಳಿ ಯುವಕನ ಮೃತ ದೇಹ ದೊರಕಿದೆ.