ವಿಜಯಪುರ: ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿರುವ ಘಟನೆ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯ (RTO) ಆವರಣದಲ್ಲಿ ನಡೆದಿದೆ.
ವಿಜಯಪುರ RTO ಕಚೇರಿ ಆವರಣದಲ್ಲಿ ಶವ ಪತ್ತೆ: ಕೊಲೆ ಶಂಕೆ - ವಿಜಯಪುರ ಆರ್ಟಿಓ ಕಚೇರಿ
ಟ್ರ್ಯಾಕ್ಟರ್ ಡ್ರೈವರ್ ಕಾಶಿರಾಮ್ ಎಂಬುವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ವಿಜಯಪುರ ನಗರದ ಪ್ರಾದೇಶಿಕ ಸಾರಿಗೆ ಕಚೇರಿ ಆವರಣದಲ್ಲಿ ಪತ್ತೆಯಾಗಿದೆ. ಪೊಲೀಸರು ಕೊಲೆ ಮಾಡಿ ನೇಣು ಹಾಕಿರುವ ಶಂಕೆ ವ್ಯಕ್ತವಾಗಿದೆ.
![ವಿಜಯಪುರ RTO ಕಚೇರಿ ಆವರಣದಲ್ಲಿ ಶವ ಪತ್ತೆ: ಕೊಲೆ ಶಂಕೆ dead-body-found-at-vijayapura-rto-office-premises](https://etvbharatimages.akamaized.net/etvbharat/prod-images/768-512-12930434-thumbnail-3x2-kdkdd.jpg)
ವಿಜಯಪುರ ಆರ್ಟಿಓ ಕಚೇರಿ
ಅಸು ಊರ್ಫ್ ಕಾಶಿರಾಮ (52) ಮೃತ ವ್ಯಕ್ತಿ. ಸ್ಥಳದಲ್ಲಿ ರಕ್ತ ಕಂಡು ಬಂದಿದ್ದು, ಕೊಲೆ ಮಾಡಿ ನಂತರ ನೇಣು ಬಿಗಿದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಗಾಂಧಿ ಚೌಕ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಟ್ರ್ಯಾಕ್ಟರ್ ಡ್ರೈವರ್ ಆಗಿದ್ದ ಕಾಶಿರಾಮ ಬೇರೆಯವರೊಂದಿಗೆ ಗಲಾಟೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.