ವಿಜಯಪುರ:ಡಿಸಿಎಂ ಹುದ್ದೆ ರದ್ಧತಿ ಕುರಿತು ಬೀದಿಯಲ್ಲಿ ಚರ್ಚೆ ಮಾಡೋದಿಲ್ಲ. ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಡಿಸಿಎಂ ಹುದ್ದೆ ರದ್ಧತಿ ಕುರಿತು ಬೀದಿಯಲ್ಲಿ ಚರ್ಚೆ ಮಾಡೋದಿಲ್ಲ.. ಡಿಸಿಎಂ ಲಕ್ಷ್ಮಣ ಸವದಿ - DCM Lakshmana Savadi react to media
ಡಿಸಿಎಂ ಹುದ್ದೆ ರದ್ಧತಿ ಕುರಿತು ಬೀದಿಯಲ್ಲಿ ಚರ್ಚೆ ಮಾಡೋದಿಲ್. ಎಲ್ಲವೂ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಆಗುತ್ತದೆ. ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರು ಅಂತಾ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ತಾಲೂಕಿನ ಹಿಟ್ನಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಮೂರು ಜನ ಡಿಸಿಎಂಗಳಿದ್ದರೂ ಯಾವುದೇ ಭದ್ರತೆ ತೆಗೆದುಕೊಂಡಿಲ್ಲ. ಸಚಿವರಿಗೆ ಯಾವ ಭದ್ರತೆ ಇರುತ್ತದೆ ಅದನ್ನು ಸಹ ನಾವು ತೆಗೆದುಕೊಂಡಿಲ್ಲ. ಹಿಂದಿನ ಸರ್ಕಾರದಲ್ಲಿ ಡಾ ಜಿ ಪರಮೇಶ್ವರ್ ಅವರು ಝಿರೋ ಟ್ರಾಫಿಕ್ ತೆಗೆದುಕೊಂಡಿದ್ರು. ಹಾಗಾಗಿ ಸಾರ್ವಜನಿಕರಿಗೆ ತೊಂದರೆಯಾಗಿತ್ತು. ಹೀಗಾಗಿ ನಾವು ಯಾವುದೇ ಝಿರೋ ಟ್ರಾಫಿಕ್ ತಗೆದುಕೊಂಡಿಲ್ಲ ಎಂದು ಮಾಜಿ ಡಿಸಿಎಂ ಜಿ ಪರಮೇಶ್ವರ್ಗೆ ಟಾಂಗ್ ನೀಡಿದರು.
ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿದ ಡಿಸಿಎಂ, ವಿಸ್ತರಣೆ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಅಥಣಿ-ಕಾಗವಾಡಕ್ಕೆ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದೇವೆ ಎಂದರು. ತುಮಕೂರಲ್ಲಿ ಮೋದಿ ಕಾರ್ಯಕ್ರಮದ ಬಗ್ಗೆ ವಿರೋಧ ಪಕ್ಷಗಳ ಟೀಕೆ ಕುರಿತು ಪ್ರತಿಕ್ರಿಯಿಸಿದ ಅವರು, ವಿರೋಧ ಪಕ್ಷಗಳು ಇರೋದೆ ನಮ್ಮ ತೆಗಳಲು. ಅವರು ರಾಜಕೀಯಗೋಸ್ಕರವಾಗಿ ಅನೇಕ ಟೀಕೆ-ಟಿಪ್ಪಣಿಗಳನ್ನು ಮಾಡುತ್ತಾರೆ. ಅದರ ಕುರಿತು ನಾವು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ವಿರೋಧ ಪಕ್ಷದ ನಾಯಕರಿಗೆ ಟಾಂಗ್ ನೀಡಿದರು.