ಕರ್ನಾಟಕ

karnataka

ETV Bharat / state

ಕಾಂಗ್ರೆಸ್​ನವರ ಬಳಿ ಹೇಳಲು ಏನೂ ಇಲ್ಲ, ಅದ್ಕೆ ಏನಾದ್ರೂ ಹೇಳಿಕೆ ಕೊಡ್ತಾರೆ: ಕಾರಜೋಳ - ವಿಜಯಪುರ ಕಾರಜೋಳ ಸುದ್ದಿ

ಮಂಗಳೂರು ಗಲಭೆ ಕುರಿತಾಗಿ ಮಾಧ್ಯಮಗಳಲ್ಲಿ 25 ವಿಡಿಯೋ ತುಣುಕುಗಳು ಪ್ರಸಾರವಾಗಿವೆ. ಜನ ಕೂಡ ನೋಡಿದ್ದಾರೆ. ಕಾಂಗ್ರೆಸ್​​ನವರಿಗೆ ಹೇಳಲು ಏನು ಇಲ್ಲ. ಹಾಗಾಗಿ ಮಾಧ್ಯಮಗಳಲ್ಲಿ ಏನಾದ್ರೂ ಹೇಳಿಕೆ ಕೊಟ್ಟುಕೊಂಡು ಇರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.

DCM Govinda Karajola
ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ : ಕಾರಜೋಳ

By

Published : Dec 25, 2019, 10:52 PM IST

ವಿಜಯಪುರ:ಮಂಗಳೂರು ಗಲಭೆ ಕುರಿತಾಗಿ ಮಾಧ್ಯಮಗಳಲ್ಲಿ 25 ವಿಡಿಯೋ ತುಣುಕುಗಳು ಪ್ರಸಾರವಾಗಿವೆ. ಜನ ಕೂಡ ನೋಡಿದ್ದಾರೆ. ಕಾಂಗ್ರೆಸ್​​ನವರಿಗೆ ಹೇಳಲು ಏನು ಇಲ್ಲ. ಹಾಗಾಗಿ ಮಾಧ್ಯಮಗಳಲ್ಲಿ ಏನಾದ್ರೂ ಹೇಳಿಕೆ ಕೊಟ್ಟುಕೊಂಡು ಇರ್ತಾರೆ ಎಂದು ಡಿಸಿಎಂ ಗೋವಿಂದ ಕಾರಜೋಳ ಕಾಂಗ್ರೆಸ್ ಪಕ್ಷದ ನಾಯಕರಿಗೆ ಟಾಂಗ್ ನೀಡಿದ್ದಾರೆ.

ವಿಜಯಪುರ ತಾಲೂಕಿನಲ್ಲಿದೆ ಬುರಣಾಪುರದ ವಿಮಾನ ನಿಲ್ದಾಣ ಜಾಗವನ್ನು ವೀಕ್ಷಣೆ ಮಾಡಿ ಮಾತನಾಡಿದ ಅವರು, ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ. ಈ ಕಾನೂನನ್ನು 130 ಕೋಟಿ ಜನ ಸ್ವಾಗತಿಸಬೇಕು ಎಂದರು.

ಪೌರತ್ವ ಕಾಯ್ದೆಯನ್ನು ದೇಶದ ಭದ್ರತೆಗೆಂದು ಜಾರಿಗೆ ತರಲಾಗಿದೆ: ಕಾರಜೋಳ

ಪೌರತ್ವ ಕಾಯ್ದೆಯಿಂದ ಭಾರತೀಯರಿಗೆ ಅನ್ಯಾಯವಾಗುವುದಿಲ್ಲ. ಹೊರ ದೇಶದಿಂದ ಭಾರತಕ್ಕೆ ನುಸುಳಿ ಬಂದು ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡುವ ಕೃತ್ಯದಲ್ಲಿ ಯಾರು ತೊಡಗಿದ್ದಾರೆ‌ಯೋ, ಯಾರು ಭಯೋತ್ಪಾದಕ ಕೃತ್ಯದಲ್ಲಿ ತೊಡಗಿದ್ದಾರೆಯೋ ಅವರಿಗೆ ತೊಂದರೆಯಾಗುತ್ತೆ ಎಂದರು. ಇನ್ನು ಸಿಎಂ ಯಡಿಯೂರಪ್ಪಗೆ ಕೇಳರದಲ್ಲಿ ಘೇರಾವ್ ಕುರಿತು, ಒಂದು ರಾಜ್ಯದ ಮುಖ್ಯಮಂತ್ರಿ ಅಲ್ಲಿಗೆ ಹೋದಾಗ ಭದ್ರತೆ ಒದಗಿಸಲಾದಷ್ಟು ಅಸಹಾಯಕ ಸ್ಥಿತಿಯಲ್ಲಿರುವ ಸರ್ಕಾರ ಅಲ್ಲಿ ಆಡಳಿತ ನಡೆಸುತ್ತಿದೆ ಎಂದರು.

ವಿಜಯಪುರದಲ್ಲಿ ವಿಮಾನ ನಿಲ್ದಾಣದ ವಿಚಾರವಾಗಿ ಮಾತನಾಡಿದ ಅವರು, ಜಾಗ ಲೆವಲಿಂಗ್ ಮಾಡಲು 54 ಕೋಟಿಗೂ ಅಧಿಕ ವೆಚ್ಚ ತಗಲುತ್ತದೆ. ಹೀಗಾಗಿ ಅಧಿಕಾರಿಗಳೊಂದಿಗೆ ಬಂದು ಜಾಗವನ್ನು ಪರಿಶೀಲನೆ ಮಾಡಿದ್ದೇನಿ‌. ನಮ್ಮ ಅಧಿಕಾರಾವಧಿಯಲ್ಲಿ ವಿಜಯಪುರದಲ್ಲಿ ವಿಮಾನ ಹಾರಾಟ ಮಾಡಬೇಕು ಎಂಬುದು ನಮ್ಮ ಅಸೆ. ಇನ್ನು ಎರಡು ದಿನಗಳಲ್ಲಿ ಸಿಎಂ ಯಡಿಯೂರಪ್ಪ ಗಮನಕ್ಕೆ ತರಲಾಗುವುದು ಎಂದರು.

ABOUT THE AUTHOR

...view details