ಕರ್ನಾಟಕ

karnataka

ETV Bharat / state

ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ 4 ದಿನ ಕಾಯಿರಿ: ಡಿಸಿಎಂ ಕಾರಜೋಳ - ವಿಜಯಪುರದಲ್ಲಿ ಕರ್ನಾಟಕ ಬಂದ್ ಕುರಿತು ಡಿಸಿಎಂ ಗೋವಿಂದ್ ಕಾರಜೋಳ ಪ್ರತಿಕ್ರಿಯೆ

ಮರಾಠಿಗರು ನಮ್ಮ ಅಣ್ಣ ತಮ್ಮಂದಿರು ಅವರಲ್ಲಿ ಹಿಂದುಳಿದ ಜನ ಸಾಕಷ್ಟು ಇದ್ದಾರೆ ಅವರ ಅಭಿವೃದ್ಧಿಗೆ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ ಎಂದು ಡಿಸಿಎಂ ಗೋವಿಂದ್​ ಕಾರಜೋಳ ಹೇಳಿದ್ದಾರೆ.

DCM Govind Karjol statement on cabinet expansion in Vijayapura
ಸಚಿವ ಸಂಪುಟ ವಿಸ್ತರಣೆ ಕುರಿತು ಡಿಸಿಎಂ ಗೋವಿಂದ್ ಕಾರಜೋಳ ಹೇಳಿಕೆ

By

Published : Nov 23, 2020, 1:42 PM IST

ವಿಜಯಪುರ: ಸಚಿವ ಸಂಪುಟ ವಿಸ್ತರಣೆಗೆ ಇನ್ನೂ ನಾಲ್ಕು ದಿನ‌ ಕಾಯಿರಿ ಎಂದು ಉಪಮುಖ್ಯಮಂತ್ರಿ ಗೋವಿಂದ್ ಕಾರಜೋಳ ಹೇಳಿದರು.

ಸಚಿವ ಸಂಪುಟ ವಿಸ್ತರಣೆ ಕುರಿತು ಡಿಸಿಎಂ ಗೋವಿಂದ್ ಕಾರಜೋಳ ಹೇಳಿಕೆ

ಜಿಲ್ಲೆಯ ಕಾರಜೋಳದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಂಪುಟ ವಿಸ್ತರಣೆಗೆ ಕಾಲ ಕೂಡಿ ಬಂದಿದೆ. ಇನ್ನೂ ನಾಲ್ಕು ದಿನ ಕಾಯಿರಿ ಎಂದರು.

ಬಂದ್ ಹಿಂಪಡೆದುಕೊಳ್ಳಿ: ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ವಿರೋಧಿಸಿ ವಿವಿಧ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್​​​​​​ಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಕಾರಜೋಳ, ಬಂದ್ ಕರೆ ನೀಡುವವರು ಮೊದಲು ಇತಿಹಾಸ ತಿಳಿದುಕೊಳ್ಳಲಿ, ಮರಾಠಿಗರು ಸಹ ಕನ್ನಡಿಗರು, ಮರಾಠ ಸಮಾಜದ ಶಿವಾಜಿ ಮಹಾರಾಜರು ಕನ್ನಡಿಗರು ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.

ಮರಾಠಿಗರು ನಮ್ಮ ಅಣ್ಣ ತಮ್ಮಂದಿರು ಅವರಲ್ಲಿ ಹಿಂದುಳಿದ ಜನ ಸಾಕಷ್ಟು ಇದ್ದಾರೆ, ಅವರ ಅಭಿವೃದ್ಧಿಗೆ ಸರ್ಕಾರ ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದೆ ಎಂದರು.

ಐಎಂಎ ಹಗರಣದಲ್ಲಿ ಮಾಜಿ ಸಚಿವ ರೋಷನ್​ ಬೇಗ್​ ಬಂಧನಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಅದು ಕಾನೂನು ಪ್ರಕ್ರಿಯೆ ಅದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ತನಿಖೆ ನಡೆಯುತ್ತಿದೆ. ಸಿಬಿಐ, ಇಡಿ ತನ್ನ ತನಿಖೆ ನಡೆಸುತ್ತದೆ. ಹೀಗಾಗಿ ಅದರ ಬಗ್ಗೆ ಮಾತನಾಡುವುದು ಸರಿ ಅಲ್ಲ ಎಂದರು.

For All Latest Updates

TAGGED:

ABOUT THE AUTHOR

...view details