ವಿಜಯಪುರ: ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಪುತ್ರ ಹಾಗೂ ಮೊಮ್ಮಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಗೋವಿಂದ ಕಾರಜೋಳ ಪುತ್ರನಿಗೆ ಕೊರೊನಾ ಪಾಸಿಟಿವ್ - ಗೋವಿಂದ ಕಾರಜೋಳ ಪುತ್ರ
ಡಿಸಿಎಂ ಗೋವಿಂದ ಕಾರಜೋಳ ಪುತ್ರ ಹಾಗೂ ಮೊಮ್ಮಳಿಗೆ ಕೊರೊನಾ ಸೋಂಕು ತಗುಲಿದೆ. ಸ್ನೇಹಿತನ ಹುಟ್ಟು ಹಬ್ಬಕ್ಕೆ ತೆರಳಿದ್ದ ಸಂದರ್ಭದಲ್ಲಿ ಸೋಂಕು ತಗುಲಿರುವುದಾಗಿ ಮೂಲಗಳು ತಿಳಿಸಿವೆ.

ಗೋವಿಂದ ಕಾರಜೋಳ
ಸ್ನೇಹಿತನ ಹುಟ್ಟು ಹಬ್ಬಕ್ಕೆ ತೆರಳಿದ್ದ ಡಿಸಿಎಂ ಪುತ್ರನಿಗೆ, ಅಲ್ಲಿಂದಲೇ ಕೊರೊನಾ ತಗಲಿರುವ ಸಾಧ್ಯತೆಗಳಿವೆ ಎಂದು ಮೂಲಗಳು ಖಚಿತ ಪಡಿಸಿವೆ.
ಆದರೆ ಜಿಲ್ಲಾಡಳಿತವಾಗಲಿ, ಆರೋಗ್ಯ ಇಲಾಖೆಯಾಗಲಿ ಡಿಸಿಎಂ ಪುತ್ರ ಹಾಗೂ ಮೊಮ್ಮಗಳಿಗೆ ಕೊರೊನಾ ಪಾಸಿಟಿವ್ ಬಂದಿರುವ ಕುರಿತು ಸ್ಪಷ್ಟ ಮಾಹಿತಿ ನೀಡಿಲ್ಲ. ಈ ಕುರಿತು ರಾಜ್ಯ ಹೆಲ್ತ್ ಬುಲಟೆನ್ನಲ್ಲಿ ಖಚಿತವಾಗಲಿದೆ.