ಕರ್ನಾಟಕ

karnataka

ETV Bharat / state

ಜಿಲ್ಲಾಸ್ಪತ್ರೆಯನ್ನು ಕೋವಿಡ್​-19 ಹಾಸ್ಪಿಟಲ್​ ಆಗಿ ಪರಿವರ್ತಿಸಲು ಸಿದ್ಧತೆ : ಡಿಸಿ - vijaypur latest news

ನಗರದಲ್ಲಿ ಕೊರೊನಾ ಆಸ್ಪತ್ರೆ ಕುರಿತಂತೆ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ವಹಿಸಿದ್ದು, ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸುವ ಕುರಿತಂತೆ ಬೇಕಾದ ಸೌಲಭ್ಯಗಳ ಕುರಿತು ಖರ್ಚು ವೆಚ್ಚದ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

DC Y. S Patil
ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ

By

Published : Apr 6, 2020, 6:07 PM IST

ವಿಜಯಪುರ : ಕೋವಿಡ್-19 ನಿಯಂತ್ರಣಕ್ಕಾಗಿ ಇನ್ನೂ ಹೆಚ್ಚಿನ ಮುನ್ನೆಚ್ಚರಿಕೆ ಕೈಗೊಳ್ಳಲು ಸನ್ನದ್ಧಗೊಳ್ಳುವ ಜೊತೆಗೆ ನಗರದಲ್ಲಿ ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸಲು ಬೇಕಾದ ಅವಶ್ಯಕತೆಗಳ ಬಗ್ಗೆ ಖರ್ಚು ವೆಚ್ಚದ ವರದಿ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿ ವೈ. ಎಸ್. ಪಾಟೀಲ್​ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೋವಿಡ್-19 ಮುನ್ನೆಚ್ಚರಿಕೆ ಕುರಿತು ಅಧಿಕಾರಿ ಗಳೊಂದಿಗೆ ಸಭೆ ನಡೆಸಿದ ಅವರು ನಗರದಲ್ಲಿ ಕೊರೊನಾ ಆಸ್ಪತ್ರೆ ಕುರಿತಂತೆ ಜವಾಬ್ದಾರಿಯನ್ನು ಮಹಾನಗರ ಪಾಲಿಕೆಗೆ ವಹಿಸಿದ್ದು, ಜಿಲ್ಲಾಸ್ಪತ್ರೆಯನ್ನು ಕೋವಿಡ್-19 ಆಸ್ಪತ್ರೆಯಾಗಿ ಪರಿವರ್ತಿಸುವ ಕುರಿತಂತೆ ಬೇಕಾದ ಸೌಲಭ್ಯಗಳ ಕುರಿತು ಖರ್ಚು ವೆಚ್ಚದ ವರದಿ ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅದರಂತೆ ಮುಂಬರುವ ದಿನಗಳಲ್ಲಿ ಪಾಸಿಟಿವ್ ಪ್ರಕರಣ ಬಂದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುನ್ನಚ್ಚರಿಕೆಗಳ ಬಗ್ಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು. ಖಾಸಗಿ ತಜ್ಞ ವೈದ್ಯರ ಸೇವೆ ಪಡೆಯುವ ಬಗ್ಗೆ ಸಹ ಕ್ರಮ ಕೈಗೊಳ್ಳಬೇಕು. ಎಸ್‍ಡಿಆರ್​ಎಫ್​ ಅನುದಾನದ ಅಡಿ ಕೋವಿಡ್-19 ಆಸ್ಪತ್ರೆಯಾಗಿ ಜಿಲ್ಲಾಸ್ಪತ್ರೆ ಪರಿವರ್ತಿಸುವ ಬಗ್ಗೆ ಅಗತ್ಯ ಸೌಕರ್ಯಗಳ ಬಗ್ಗೆ ಈಗಿನಿಂದಲೇ ಸಿದ್ದತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.

ಘೋಷಿತ – ಅಘೋಷಿತ – ಅಸಂಘಟಿತ ಕಾರ್ಮಿಕರಿಗೆ ಮಾತ್ರ ಹಾಲು ವಿತರಣೆ :ಘೋಷಿತ – ಅಘೋಷಿತ – ಅಸಂಘಟಿತ ಕಾರ್ಮಿಕರು ಮತ್ತು ನಿರಾಶ್ರಿತ ಶಿಬಿರದಲ್ಲಿರುವವರಿಗೆ ಮಾತ್ರ ಒಂದು ಲೀಟರ್ ಹಾಲು ವಿತರಣೆ ಯೋಜನೆಯಿದ್ದು, ಅದರನ್ವಯ ಹಾಲನ್ನು ವಿತರಿಸಲಾಗಿದೆ. ಒಟ್ಟು 25 ಸಾವಿರ ಲೀಟರ್ ಹಾಲನ್ನು ಜಿಲ್ಲಾದ್ಯಂತ ವಿತರಿಸಲಾಗುತ್ತಿದ್ದು, ಮೇಲ್ಕಂಡವರನ್ನು ಹೊರತುಪಡಿಸಿ ಇತರರಿಗೆ ಹಾಲನ್ನು ನೀಡಲಾಗುತ್ತಿಲ್ಲ ಎಂದರು.

ಐತಿಹಾಸಿಕ ಸ್ಮಾರಕ ಗೋಲಗುಂಬಜ್ ವ್ಯಾಪ್ತಿಯ ನವಿಲುಗಳಿಗೂ ಆಹಾರ ಧಾನ್ಯ : ನಗರದಲ್ಲಿ ಬಿಡಾಡಿ ದನಗಳಿಗೆ ಉಚಿತವಾಗಿ ಮೇವನ್ನು ಮತ್ತು ನೀರಿನ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಪಶುಸಂಗೋಪನೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದ್ದು, ನಗರದಲ್ಲಿರುವ ಐತಿಹಾಸಿಕ ವಿಶ್ವವಿಖ್ಯಾತ ಗೋಲಗುಂಬಜ್ ಆವರಣದಲ್ಲಿರುವ ನವಿಲುಗಳಿಗೂ ಆಹಾರದ ಕೊರತೆಯಾಗದಂತೆ ನಿಗಾವಹಿಸಲು ಆಹಾರ - ಧಾನ್ಯ ಹಾಕಲು ನಿರ್ಧರಿಸಲಾಗಿದ್ದು, ದಿನಕ್ಕೆ ಎರಡು ಬಾರಿ ಈ ಅವಕಾಶ ಕಲ್ಪಿಸಲು ಪ್ರಾಚ್ಯವಸ್ತು ಮತ್ತು ಸರ್ವೇಕ್ಷಣಾ ಇಲಾಖೆಗೆ ಸೂಚಿಸುವಂತೆ ಪಶು ಸಂಗೋಪನೆ ಇಲಾಖೆ ಉಪ ನಿರ್ದೇಶಕರು ಸಭೆಯ ಗಮನಕ್ಕೆ ತಂದರು.

ABOUT THE AUTHOR

...view details