ವಿಜಯಪುರ:ಭಯಾನಕ ಶಬ್ದಗಳಿಂದ ಭೂಕಂಪನದ ಭೀತಿ ಎದುರಿಸುತ್ತಿದ್ದ ಜಿಲ್ಲೆಯ ಕೆಲ ಗ್ರಾಮಗಳ ಗ್ರಾಮಸ್ಥರ ಆತಂಕ ದೂರ ಮಾಡುವ ಸಲುವಾಗಿ ಜಿಲ್ಲಾಧಿಕಾರಿಗಳು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಭಯಾನಕ ಶಬ್ದಗಳಿಂದ ಭೂಕಂಪನದ ಭೀತಿ ಎದುರಿಸುತ್ತಿರುವ ಗ್ರಾಮಸ್ಥರು ಅಕ್ಟೋಬರ್ 16 ರಿಂದ ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಭೂಕಂಪನದ ಅನುಭವವಾಗಿದ್ದು, ಗ್ರಾಮಸ್ಥರ ಆತಂಕ ದೂರ ಮಾಡಲು ರಾಜ್ಯ ನೈಸರ್ಗಿಕ ವಿಕೋಪದ ಹಿರಿಯ ಅಧಿಕಾರಿಗಳ ತಂಡವನ್ನು ಕಳುಹಿಸಿ ವೈಜ್ಞಾನಿಕವಾಗಿ ಈ ಗ್ರಾಮಗಳಲ್ಲಿ ಪರಿಶೀಲನೆ ನಡೆಸಬೇಕೆಂದು ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರಿಗೆ ಡಿಸಿ ಪತ್ರ ಕಳೆದ ಒಂದು ವಾರದಿಂದ ಕೊಲ್ಹಾರ ತಾಲೂಕಿನ ಮಸೂತಿ, ಮಲಘಾಣ ಗ್ರಾಮದಲ್ಲಿ ಭೂಕಂಪನದ ಅನುಭವವಾಗುತ್ತಿರುವ ಕುರಿತು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಈ ಸಂಬಂಧ ಅ. 27ರಂದು ಕೊಲ್ಹಾರ ತಹಸೀಲ್ದಾರ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಮಲಘಾಣ ಮತ್ತು ಮಸೂತಿ ಗ್ರಾಮಗಳಿಗೆ ತೆರಳಿ ಗ್ರಾಮಸ್ಥರ ಜೊತೆ ಚರ್ಚೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಆದರೆ, ನಿಗೂಢ ಶಬ್ದ ಕೇಳಿಸುವುದು ಇನ್ನೂ ಮುಂದುವರೆದಿದ್ದು, ಗ್ರಾಮಸ್ಥರ ಆತಂಕಕ್ಕೆ ಪೂರ್ಣವಿರಾಮವಿಡುವ ಸಲುವಾಗಿ ಜಿಲ್ಲಾಧಿಕಾರಿಗಳು ಈ ಹೆಜ್ಜೆ ಇಟ್ಟಿದ್ದಾರೆ. ಇನ್ನೂ ಇದಕ್ಕೆ ಸ್ಪಂದಿಸಿರುವ ನೈಸರ್ಗಿಕ ವಿಕೋಪ ಕೇಂದ್ರ ನಿರ್ದೇಶಕರು ದೂರವಾಣಿ ಮೂಲಕ ಮಾತನಾಡಿ ಶೀಘ್ರವೇ ತಂಡವನ್ನು ಕಳುಹಿಸಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.